ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಕನ್ನೇಶ್ವರ ಶ್ರೀ ಮಂಠದಲ್ಲಿ 2025ನೇ ಹೊಸ ವರ್ಷದ ನೂತನ ಆಚರಣೆಗೆ ಶ್ರೀಮಠದಲ್ಲಿ 2025 ರ ಸಂಖ್ಯೆಯನ್ನು ದೀಪಗಳ ಮೂಲಕ ಹಾಗೂ ಹೂವಿನ ಚಿತ್ತಾರದ ಮೂಲಕ ಬಿಡಿಸಿ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 2025ನ್ನು ಬರಮಾಡಿಕೊಳ್ಳುವ ಮೂಲಕ ಶ್ರೀಮಠ ಸಾಕ್ಷಿಕರಿಸಿದೆ.
ಇನ್ನು 2025ನೇ ಸಂಖ್ಯೆಗೆ ವಿಶೇಷವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀ ಕನ್ನೇಶ್ವರ ಮಠದ ಶ್ರೀ ಸತ್ ಉಪಾಸಿ ಮಲ್ಲಪ್ಪ ಮಹಾಸ್ವಾಮೀಜಿಗಳು ಭಕ್ತಾದಿಗಳಿಗೆ ಶುಭ ಹಾರೈಸಿದ್ದಾರೆ.