ಚಳ್ಳಕೆರೆ :
ಚಿತ್ರದುರ್ಗ: ಕೋಟೆ ನೋಡಲು ಅಮೇರಿಕಾದಿಂದ
ಆಗಮಿಸಿದ್ದ ಕೆವಿನ್
ಹೊಸ ವರ್ಷದಾಚರಣೆಯಲ್ಲಿ ಕೋಟೆ ನೋಡಲು ದೂರದ
ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾದಿಂದ ಪ್ರವಾಸಿಗರ
ಕುಟುಂಬ ಬಂದಿದ್ದು, ಕೋಟೆಯನ್ನು ಕಣ್ಣುಂಬಿಕೊಂಡಿತು.
ಕೋಟೆಯ ಒನಕೆ ಓಬವ್ವನ ಕಿಂಡಿ, ಏಕನಾಥೇಶ್ವರಿ ದೇವಸ್ಥಾನ,
ಆರನೇ ಬಾಗಿಲು ಠೀಕಿನ ಬಾಗಿಲು ಎಲ್ಲ ವೀಕ್ಷಸಿದರು.
ನಂತರ ಮಾತಾಡಿ, ಕೋಟೆಯು ಒಂದು ಐತಿಹಾಸಿಕ ಪ್ರವಾಸಿ
ತಾಣವಾಗಿದ್ದು, ಬಹಳಷ್ಟು ಖುಷಿಯಾಗಿದೆ. ಇದರ ಜೊತೆಗೆ
ಈಗಾಗಲೇ ಬಾದಾಮಿ ಹೈಹೊಳೆ ಪಟ್ಟದಕಲ್ಲು ಇನ್ನಿತರೇ ಸ್ಥಳಗಳನ್ನು
ವೀಕ್ಷಿಸಿಕೊಂಡು ಬಂದಿದ್ದೇವೆಂದು ಪ್ರವಾಸಿಗ ಕೆವಿನ್ ಹೇಳಿದರು.