ಚಳ್ಳಕೆರೆ :
ಚಿತ್ರದುರ್ಗ: ಬಿಜೆಪಿ ಕಾಂಗ್ರೆಸ್ ಕಾರ್ಮಿಕರನ್ನು
ಒಡೆದಾಳುತ್ತಿವೆ
ಬಿಜೆಪಿ ಮತ್ತು ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರಗಳು
ಕಾರ್ಮಿಕರನ್ನು ಒಡೆದಾಳುವ ನೀತಿ ಅನುಸರಿಸುತ್ತಿವೆ ಎಂದು
ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವೈ ಕುಮಾರ್
ಆರೋಪಿಸಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆಯಲ್ಲಿ
ಮಾತಾಡಿ, ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರ
ನೋಂದಣಿ ಮಾಡಲು ಆದೇಶಿಸಬೇಕು.
ಸೆಸ್ ವಸೂಲಿ ಪ್ರಾಧಿಕಾರ
ರಚಿಸಬೇಕು. ಹಿಂದಿನ ಎಲ್ಲಾ ಕಾಮಗಾರಿ ಮೌಲ್ಯಮಾಪನಕ್ಕೆ
ಅಧಿಕಾರಿಗಳ ನೇಮಕ ಮಾಡಿ ಶೇ. 2% ರಂತೆ ಬಡ್ಡಿ ಸಹಿತ ಸೆಸ್
ವಸೂಲಿ ಮಾಡಬೇಕು ಎಂದರು.