ಚಳ್ಳಕೆರೆ :
ಕ್ಯಾನ್ಸರ್ ಗೆದ್ದ ಶಿವಣ್ಣ: ಫ್ಯಾನ್ಸಿಗೆ ಗುಡ್ ನ್ಯೂಸ್ ಕೊಟ್ಟ
ನಟ
ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ
ಬಳಿಕ ಗುಣಮುಖರಾಗಿದ್ದಾರೆ.
ಕ್ಯಾನ್ಸರ್ ಗೆದ್ದಿರುವ ಶಿವಣ್ಣ
ಅಭಿಮಾನಿಗಳಿಗೆ ಹೊಸ ವರ್ಷದಂದು ವಿಡಿಯೋ ಮಾಡಿ ಶುಭ
ಕೋರಿದ್ದಾರೆ.
ಜೊತೆಗೆ ಕ್ಯಾನ್ಸರ್‌ನಿಂದ ಮುಕ್ತರಾಗಿರುವ ಕುರಿತು
ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ
ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಆರೋಗ್ಯದ ಎಲ್ಲ
ವರದಿಗಳು ನೆಗೆಟಿವ್ ಬಂದಿವೆ.
ಖುದ್ದು ಶಿವಣ್ಣ ಈ ವಿಚಾರವನ್ನು
ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ದಿಂದ ಮುಕ್ತಿ ಪಡೆದಿರುವುದಾಗಿ ಕೂಡ
ಹೇಳಿಕೊಂಡಿದ್ದಾರೆ.