ಚಳ್ಳಕೆರೆ :
ಚಳ್ಳಕೆರೆ: ಚಿಕ್ಕಪ್ಪನ ಹಳ್ಳಿಯಲ್ಲಿ ಅಂಬೇಡ್ಕರ್ ಗೆ
ಅಪಮಾನ
ಹೊಸ ವರ್ಷದ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿರುವ
ಘಟನೆ ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜೈ ಭೀಮ್ ಸಂಘಟನೆಯು ಗ್ರಾಮದಲ್ಲಿ ಜೈ ಭೀಮ್ ಎಂಬ
ಅಂಬೇಡ್ಕರ್ ಬಾವ ಚಿತ್ರವಿರುವ ಬಾವುಟವನ್ನು ಕಂಬಕ್ಕೇರಿಸಿ
ಗ್ರಾಮದ ಮಧ್ಯೆ ಸ್ಥಾಪಿಸಲಾಗಿತ್ತು.
ಆದರೆ ಹೊಸ ವರ್ಷದ ರಾತ್ರಿ
ಕಿಡಿಗೇಡಿಗಳು ಕಂಬ ಬಾವುಟ ಕಿತ್ತು ಸುಟ್ಟು ಬಾವಿಗೆ ಹಾಕಿದ್ದ ಸ್ಥಳಕ್ಕೆ
ಭೇಟಿ ನೀಡಿದ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು
ಪ್ರಕರಣ ದಾಖಲಿಸಿದ್ದಾರೆ.