ಚಳ್ಳಕೆರೆ :
ಚಳ್ಳಕೆರೆ: ಐತಿಹಾಸಿಕ ಚಿಕ್ಕ ಕೆರೆ ಸ್ವಚ್ಛತೆ ಕಾಪಾಡಿ
ಚಳ್ಳಕೆರೆ ನಾಯಕನಹಟ್ಟಿ ಐತಿಹಾಸಿಕ ಹಿನ್ನೆಲೆ ಇರುವ ಚಿಕ್ಕ
ಕೆರೆಯಲ್ಲಿ ಬಾರ್ ಗಳ ತ್ಯಾಜ್ಯ, ಬಾಟಲಿ, ಕ್ಷೌರದ ಕೂದಲು
ಔಷಧಗಳ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ಕಸ ಹಾಕಲಾಗುತ್ತಿದೆ
ಇದರಿಂದ ಕೆರೆಯ ಪರಿಸರ ಹಾಳಾಗುತ್ತಿದೆಂದು ಸ್ಥಳೀಯರು
ಆರೋಪಿಸಿದ್ದಾರೆ.
ಕಡಿವಾಣ ಹಾಕಲು ಪ ಪಂ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರ ವಿರುದ್ಧ
ಕ್ರಮ ಕೈಗೊಂಡು ಕೆರೆ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಬೇಕೆಂದು
ಆಗ್ರಹಿಸಿದ್ದಾರೆ.