ಚಳ್ಳಕೆರೆ :
ಚಿತ್ರದುರ್ಗ: ಗಾಂಜಾ ವ್ಯಸನಿಗಳ ವಿರುದ್ಧ ಕ್ರಮ
ತೆಗೆದುಕೊಳ್ಳಲು ಮನವಿ
ಚಿತ್ರದುರ್ಗ ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡು
ಓಡಾಡುವ ಬೈಕ್ ಗಳ ನಿಯಂತ್ರಣದ ಜೊತೆಗೆ ಗಾಂಜಾ ವ್ಯಸನಿಗಳ
ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಮಾಹಿತಿ
ಹಕ್ಕು ವೇದಿಕೆಯಿಂದ ಅಪರ ಜಿಲ್ಲಾಧಿಕಾರಿಗಳಿಂದು ಮನವಿ
ಸಲ್ಲಿಸಿತು.
ಕೆಲ ಯುವಕರು ಬೈಕ್ ನ ಸೈಲೆನ್ಸರ್ ತೆಗೆಸಿ ಬೈಕ್
ಚಲಾಯಿಸುವಾಗ ಕರ್ಕಶ ಶಬ್ದ ಬರುವಂತೆ ಮಾಡಿಕೊಂಡು
ಜನ ಸಂದಣಿ ಇರುವ ಕಡೆ ಓಡಾಡುತ್ತಿದ್ದಾರೆ.
ಇದರಿಂದ ಬಹಳ
ಸಮಸ್ಯೆಯಾಗುತ್ತಿದ್ದು, ಇವರ ಮೇಲೆ ಕ್ರಮ ತೆಗೆದುಕೊಳ್ಳಲು
ಸೂಚಿಸಬೇಕೆಂದು ಒತ್ತಾಯಿಸಿದರು.