ಚಳ್ಳಕೆರೆ :
ಮೊಳಕಾಲ್ಕೂರು: ಮಾದಿಗ ಜನಾಂಗದ ಮೇಲೆ ಹಲ್ಲೆ
ಮೊಳಕಾಲ್ಮುರು ತಾಲೂಕಿನಂತೆ ಮಾದಿಗ ಸಮುದಾಯದವರ
ಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸುತ್ತಿದ್ದು,
ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ ಎಂದು
ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದ್ದಾರೆ.
ಮೊಳಕಾಲ್ಕೂರಿನಲ್ಲಿಂದು ಮಾತಾಡಿ, ಕಳೆದ ಎರಡು ದಿನಗಳ
ಹಿಂದೆ ಬಿಜಿ ಕೆರೆಯಲ್ಲಿ ಮಾದಿಗ ಸಮುದಾಯದ ಮೇಲೆ ಅನ್ಯ
ಸಮುದಾಯದವರು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದವರು
ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ನ್ಯಾಯಕೊಡಿಸುವಲ್ಲಿ
ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿದರು.