ಚಳ್ಳಕೆರೆ :
ಹಿರಿಯೂರು: ಅಕ್ರಮ ಮಣ್ಣು ಮಾರಾಟ ಕ್ರಮಕ್ಕೆ
ಒತ್ತಾಯ
ಹಿರಿಯೂರಿನ ಸೊಂಡೆಕೆರೆ ಗ್ರಾಮದಲ್ಲಿ 20 ವರ್ಷದಿಂದ ಸಾಗುವಳಿ
ಮಾಡುತ್ತಿರುವ, ದಲಿತರ ಭೂಮಿಗಳಲ್ಲಿ ಮಣ್ಣನ್ನು ಅಕ್ರಮ
ಮಾರಾಟ ಮಾಡಲಾಗುತ್ತಿದೆಂದು ಆರೋಪಿಸಿ ಮಹಾನಾಯಕ
ದಲಿತ ಸೇನೆ ಸಂಘಟನೆ ಯಿಂದ ತಹಶೀಲ್ದಾರ್ ರಾಜೇಶ್ ಕುಮಾರ್
ಗೆ ಇಂದು ಮನವಿ ಸಲ್ಲಿಸಿತು.
ಗ್ರಾಮದ ಸ ನಂ 32 35ರಲ್ಲಿ ಎಸ್ ಸಿ
ಎಸ್ ಟಿ ಸಮುದಾಯದ ಹೆಸರಿಗೆ 9091- 92 ರಲ್ಲಿ ಸರ್ಕಾರ ಭೂ
ಮಂಜೂರಾತಿ ಆದೇಶ ನೀಡಿದೆ. ಇದೀಗ ದಲಿತರ ಜಮೀನುಗಳಲ್ಲಿ
ಗುಂಡಿ ತೆಗೆದು ಮಣ್ಣು ಸಾಗಾಟ ಮಾಡುತ್ತಿದ್ದಾರೆಂದು ಸಂಘಟನೆ
ಪದಾಧಿಕಾರಿಗಳು ದೂರಿದರು.