ನಾಯಕನಹಟ್ಟಿ ಪಟ್ಟಣಕ್ಕೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ಒತ್ತಾಯ

ನಾಯಕನಹಟ್ಟಿ :
ಮಧ್ಯ ಕರ್ನಾಟಕದ ಐತಿಹಾಸಿಕ ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹೊರರಾಜ್ಯಗಳಿಂದ ಆಗಮಿಸುತ್ತಿದ್ದು, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನಕ್ಕೆ ಬಂದವರು ರಸ್ತೆಯಲ್ಲಿ ಬಸ್ಸು ಬರುವರಿಗೂ ಕಾದು ಹೋಗುತ್ತಾರೆ ಎಂದು ಕರ್ನಾಟಕ ರಾಜ್ಯದ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯ ಮಾಡಿದರು.
ಈ ಸಂದಭದಲ್ಲಿ ಮಾತಾಡಿದವರು ನಾಯಕನಹಟ್ಟಿ ಎಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಿದ್ದವಾಗಿರುವ ಸ್ಥಳವಾಗಿದ್ದು, ಈ ಪಟ್ಟಣದಿಂದ ಬೆಂಗಳೂರು, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಮಾರ್ಗ ಇರುವ ನಾಯಕನಹಟ್ಟಿ ಇಲ್ಲಿನ ವೃದ್ಧರು, ವಿಕಲಚೇತನರು, ವಿದ್ಯಾರ್ಥಿ/ನಿಯರು ಕಾಲೇಜ್‌, ಬೇರೆ ಬೇರೆ ಸ್ಥಳಗಳಿಗೆ ಹೋಗುವ ಸಮಯದಲ್ಲಿ ಬಸ್ಸುಗಳು ಬರು ತನಕ ದಾರಿಯಲ್ಲಿ ನಿಂತುಕೊಳ್ಳು ಪರಿಸ್ಥಿತಿ ಆಗಿದೆ, ಪ್ರತಿದಿನ ಸಾವಿರಾರು ಭಕ್ತರು ನಾಡಿನ ಮೂಲ ಮೂಲೆಯಿಂದಲೂ ಆಗಮಿಸುತ್ತಾರೆ ಮೂಲಭೂತ ಸೌಕರ್ಯ ಇಲ್ಲದೇ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಹಾಗೂ ಪಾದಗಟ್ಟೆ ಹತ್ತಿರ, ಈ ಮೂರು ಸ್ಥಳಗಳಲ್ಲಿ ಬಸ್ ನಿಲ್ದಾಣ ಇಲ್ಲದಂತಾಗಿದೆ ಶೀಘ್ರದಲ್ಲಿ ಬಸ್ ನಿಲ್ದಾಣ ಸ್ಥಾಪಿಸಲು ಇತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಎಂ ಪರ್ವತಯ್ಯ ಓಬಯ್ಯನಹಟ್ಟಿ, ನಾಗರಾಜಪ್ಪ ಗಜ್ಜುಗಾನಹಳ್ಳಿ, ಗುಂತಕೋಲಮ್ಮನಹಳ್ಳಿ ಕುಮಾರ್‌, ಓಬಯ್ಯ ಗಜ್ಜುಗಾನಹಳ್ಳಿ, ಇನ್ನೂ ಮುಂತಾದವರು ಹಾಜರಿದ್ದರು.

About The Author

Namma Challakere Local News

You missed

error: Content is protected !!