.
ದಾಸರಗಿಡ್ಡಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ತಿಪ್ಪೇಸ್ವಾಮಿ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ
ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್ ಸುರೇಶ್ ಅಭಿಮತ.
ನಾಯಕನಹಟ್ಟಿ:: ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರತಿ ಸಾಧಕನ ಹಿಂದೆ ಶಿಕ್ಷಕರು ಇರುತ್ತಾರೆ ಗುರುವಿನ ಮಾರ್ಗದರ್ಶನವಿಲ್ಲದೆ ಯಾವುದೇ ಸಾಧನೆ ಅಸಾಧ್ಯ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು.
ಮಂಗಳವಾರ ಹೋಬಳಿಯ ನೇರಲಗುಂಟೆ ಗ್ರಾ.ಪಂ. ವ್ಯಾಪ್ತಿಯ ದಾಸರಗಿಡ್ಡಯ್ಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಚ್ ತಿಪ್ಪೇಸ್ವಾಮಿ ಅವರ ವಯೋ ನಿವೃತ್ತಿ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಹೆಚ್. ತಿಪ್ಪೇಸ್ವಾಮಿ ನಮ್ಮ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಪಾರವಾದ ಶಿಷ್ಯ ವೃಂದ ಬಳಗವನ್ನು ಹೊಂದಿ ತಮ್ಮ ಸೇವಾ ಅವಧಿಯಲ್ಲಿ ಅತ್ಯುತ್ತಮವಾದ ಬೋಧನೆಯನ್ನು ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಶಿಕ್ಷಣವನ್ನು ಸಂಜೀವಿನಿಯಾಗಿ ನೀಡಿದಂತಹ ಬಹಳ ಅಪರೂಪದ ಶಿಕ್ಷಕರಾಗಿದ್ದಾರೆ ಇವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಮತ್ತು ಅವರ ಆರೋಗ್ಯ ಯಾವತ್ತೂ ಸಹ ಉತ್ತಮವಾಗಿರಲಿ ದಾಸರಗಿಡ್ಡಯ್ಯನಹಟ್ಟಿಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಪ್ರತಿಯೊಬ್ಬ ಶಿಕ್ಷಕನಿಗೆ 60 ವರ್ಷ ಗಳ ಪೂರ್ಣಗೊಂಡ ನಂತರ ನಿವೃತ್ತಿ ಅನಿವಾರ್ಯವಾಗುತ್ತದೆ ಇಂತಹ ಸಂದರ್ಭದಲ್ಲಿ ನಮ್ಮ ದಾಸರಗಿಡ್ಡಯ್ಯಹಟ್ಟಿ ಊರಿನ ಗ್ರಾಮಸ್ಥರು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿ ಇಂತಹ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಿರುವುದು ಬಹಳ ಸಂತೋಷದ ಸಂಗತಿ ತಿಪ್ಪೇಸ್ವಾಮಿ ವಿಶ್ರಾಂತಿ ಜೀವನವನ್ನು ತಮ್ಮ ಕುಟುಂಬದೊಟ್ಟಿಗೆ ಒಳ್ಳೆಯ ಬಾಂಧವ್ಯ ದಿಂದ ಇಷ್ಟು ದಿನಗಳ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಆದರಿಂದ ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ತಮ್ಮ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ ಸುರೇಶ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾದ ಚಳ್ಳಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಸದಾಶಿವಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಡಿ ಬಿ ಸ್ವಾಮಿ. ಶಾಲೆಯ ಮುಖ್ಯ ಶಿಕ್ಷಕಿ ಮಂಜಮ್ಮ, ಸಿಆರ್‌ಪಿಗಳಾದ ರಮೇಶ್, ಚಂದ್ರಣ್ಣ, ಹೆಚ್ ರಾಜಣ್ಣ, ಹನುಮಂತಪ್ಪ, ಪಾಲಯ್ಯ, ಸ.ನೌ. ಪಿ.ಎಂ. ವಿಶ್ವನಾಥ್, ತಿಪ್ಪೇಸ್ವಾಮಿ, ಬಿ ಎಸ್ ವೀರಣ್ಣ, ಸೇರಿದಂತೆ ನೇರಲಗುಂಟೆ ಕ್ಲಸ್ಟರ್ ಎಲ್ಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ಗ್ರಾಮಸ್ಥರು. ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು