ಚಳ್ಳಕೆರೆ :

ದೇಶಕ್ಕೆ ಸಂವಿಧಾನವನ್ನು ಕೊಡುಗೆ ನೀಡಿದಂತಹ ಸಂವಿಧಾನ ಶಿಲ್ಪಿ ಡಾ .ಬಿಆರ್ ಅಂಬೇಡ್ಕರ್ ಗೆ ಅವಮಾನಿಸಿರುವುದು ಸರಿಯಲ್ಲ. ಕೇಂದ್ರ ಸಚಿವ ಅಮಿತ್ ಶಾ ಬಿ ಆರ್ ಅಂಬೇಡ್ಕರ್ ಅವರ ಕುರಿತು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಂವಿದಾನ ವಿಚಾರ ವೇದಿಕೆ ಅಧ್ಯಕ್ಷರಾದ ತಿಪ್ಪೇಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ‌ ಸಾಮಾಜಿಕ ಸಮಾನತೆ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇವಲವಾಗಿ ಮಾತನಾಡಿರುವುದು ಸರಿಯಲ್ಲ ಅವರ ಘನತೆಗೆ ತಕ್ಕಹಾಗೆ ಮಾತನಾಡಬೇಕು ಎಂದರು.

ಇನ್ನು ಸಂವಿಧಾನ ವಿಚಾರ ವೇದಿಕೆಯಿಂದ ಸಂವಿಧಾನದ ಮಹತ್ವ ಹಾಗೂ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಕುರಿತು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದರು..

ವೇದಿಕೆಯ ಕಾರ್ಯದರ್ಶಿ ಪುಜಾರ್ ಪರಸಪ್ಪ ಮಾತನಾಡಿ. ಕೇಂದ್ರ ಸಚಿವ ಅಮಿತ್ ಶಾ ಸಂಪಟದಿಂದ ಕೈ ಬಿಡುವಂತೆ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಗುವುದು, ಬರುವ ದಿನಗಳಲ್ಲಿ ನಮ್ಮ ವೇದಿಕೆಯಿಂದ ಸಂವಿಧಾನ ಕುರಿತು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಸಂವಿಧಾನ ವಿಚಾರ ವೇದಿಕೆಯ ವಿಜಯಕುಮಾರ್, ದ್ಯಾವರಹಳ್ಳಿ ಸುರೇಶ,ಓಬಣ್ಣ, ಹನುಮಂತರಾಯ ,ವಿಭದ್ರಪ್ಪ, ಮೈಲಾರಪ್ಪ , ವಿನೋದ್ ಕುಮಾರ್ , ಹೊನ್ನೂರಪ್ಪ , ರಾಜಣ್ಣ, ಯೋಗಾನಂದ ಇದ್ದರು….

About The Author

Namma Challakere Local News
error: Content is protected !!