ಚಳ್ಳಕೆರೆ : ಇಂದಿನ ಆಧುನಿಕ ಸಮಾಜಕ್ಕೆ ಸಾಹಿತ್ಯ ಚಿಂತನೆಗಳು ಅವಶ್ಯಕ ಎಂದು ಕನ್ನಡ
ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರು ಹಾಗೂ
ಸಾಹಿತಿಗಳಾದ ಕೊರ್ಲ ಕುಂಟೆ, ತಿಪ್ಪೇಸ್ವಾಮಿ
ಹೇಳಿದರು.

ನಗರದ ರೋಟರಿ ಬಾಲ
ಭವನದಲ್ಲಿ ಕೊರ್ಲ ಕುಂಟೆ
ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ
ವತಿಯಿಂದ ಹಮ್ಮಿಕೊಂಡದ್ದ ಕುವೆಂಪು ಜನ್ಮ
ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ,

ಸರ್ವಜನಾಂಗದ
ಶಾಂತಿಯ
ತೋಟದಂತೆ ಸಮಾಜವನ್ನು ನೋಡಬೇಕಿದೆ
ಎಂದು ಬಯಸಿದ ಮಹನೀಯರ
ಚಿಂತನೆಯನ್ನು ಅನಾವರಣ ಮಾಡುವ
ಜಾಗೃತಿ ಬೆಳೆಯಬೇಕಿದೆ ಎಂದರು..

ಇನ್ನೂ
ನಿವೃತ್ತ ತಹಸಿಲ್ದಾರ್ ಎನ್. ರಘುಮೂರ್ತಿ
ಮಾತನಾಡಿ,

ಕುವೆಂಪು ಅವರಿಗೆ ವಿದ್ಯಾ
ಗುರುಗಳಾಗಿದ್ದ ತಳುಕಿನ ವೆಂಕಣ್ಣಯ್ಯ
ನೆಲೆಯಲ್ಲಿ ಶಿಷ್ಯ ಕುವೆಂಪು ಅವರ ಸಾಹಿತ್ಯ
ಕುರಿತು ಮಾತನಾಡುವುದು
ಇತಿಹಾಸ ಅನಿಸುತ್ತದೆ.
ಸಮಾಜದ ಮಹಾನೀಯರ
ಕಾರ್ಯಕ್ರಮಗಳು ಕೇವಲ
ಒಂದು
ಜಯಂತಿ
ಸಾಂಕೇತಿಕ
ಆಗಬಾರದು., ಬಸವಣ್ಣರ ವಚನ,ಕುವೆಂಪು
ಅವರ ಕವನ, ಕನಕದಾಸರ ಕೀರ್ತನೆ,
ಡಿ.ವಿ.ಗುಂಡಪ್ಪರ ತತ್ವಗಳನ್ನು ಮನನ ಮಾಡಬೇಕು ಎಂದರು.

ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ
ಮಾತನಾಡಿ, ಪ್ರಾದೇಶಿಕವಾದ ಜನಜೀವನದ
ಸಾಹಿತ್ಯ ರಚನೆಯಲ್ಲಿ ತಳಕು ಮತ್ತು ಬೆಳೆಗೆರೆ
ಮನೆತನಗಳ ಸೇವೆ ಅನನ್ಯವಾಗಿದೆ.
ವಿಚಾರ ಸಂಪತ್ತುನಿಂದ ಮನಸ್ಸು ಸದೃಡಗೊಳ್ಳುತ್ತದೆ,
ಕುವೆಂಪು ಬರಹ
ಸಮಾನತೆಯ ರೂಪಕವಾಗಿದೆ. ಅದನ್ನು
ಕಾರಣವಾಗುತ್ತಿದೆ.
ಉಳಿಸಿಕೊಳ್ಳುವ
ಜವಾಬ್ದಾರಿಯಾಗಬೇಕು ಎಂದು ತಿಳಿದರು.

ಇದೇ ಸಂಧರ್ಭದಲ್ಲಿ
ಕೆಪಿಸಿಸಿ ಕರಕುಶಲ ವಿಭಾಗ ಅಧ್ಯಕ್ಷ ಆರ್.
ಪ್ರಸನ್ನ ಕುಮಾರ್, ಕವಯತ್ರಿ ಶಬಿನ ಮಹಮ್ಮದ್ ಅಲಿ, ಮಾತನಾಡಿದರು.
ಬಿ. ಫರಿದ್ ಖಾನ್, ಬನಶ್ರೀ ಮಂಜುಳಮ್ಮ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ,.ಎಚ್. ಅಂಕಪ್ಪ, ಜಾಲಿ ಮಂಜು,
ದ್ಯಾಮರಾಜ್, ಒನಕೆ ಓಬವ್ವ
ವೇದಿಕೆ ಅಧ್ಯಕ್ಷ ಮಾರುತಿ, ಎನ್. ಕುಶ,
ಯತೀಶ.ವೆಂಕಿ .ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು..

About The Author

Namma Challakere Local News
error: Content is protected !!