ಚಳ್ಳಕೆರೆ :
ಅಕ್ರಮ ಮಧ್ಯ ಮಾರಾಟಕ್ಕೆ ಎಡೆಮುರೆ ಕಟ್ಟಿದ ಅಬಕಾರಿ ಇಲಾಖೆ ಪೊಲೀಸರು ಗ್ರಾಮೀಣ ಪ್ರದೇಶದಲ್ಲಿ ಗಸ್ತು ತಿರುಗುವ ಮೂಲಕ ಅಕ್ರಮ ಮಧ್ಯ ಕೋರರನ್ನು ಬಂಧಿಸಿದ್ದಾರೆ.
ಚಳ್ಳಕೆರೆ ನಗರದಿಂದ ವೀರದಿಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಮಧ್ಯ ಸಾಗಣೆ ಮಾಡುತ್ತಿದ್ದ ದ್ವಿಚಕ್ರ ವಾಹನ ಮತ್ತು -5.400 ಲೀಟರ್ ಮಧ್ಯವನ್ನು ಅಬಕಾರಿ ಇಲಾಖೆ ಪೋಲೀಸರು ಜಪ್ತುಪಡಿಸಿಕೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ
ಅಬಕಾರಿ ಉಪ ನೀರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡು,
ಜಪ್ತುಪಡಿಸಿದ ಮಧ್ಯ ಅಂದಾಜು ಮೌಲ್ಯ -22400 ರೂಪಾಯಿಗಳು ಆಗಿರುತ್ತದೆ, ಇನ್ನೂ
ಬೋರಯ್ಯ ಎಂಬುವವರು ಚಿಕ್ಕ ಉಳ್ಳಾರ್ತಿ ಗ್ರಾಮ, ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ದ ಘೋರ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ
ಅಬಕಾರಿ ನಿರೀಕ್ಷಕ ಸಿ.ನಾಗರಾಜು,
ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1, ಡಿ ಟಿ. ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು-2 ದರ್ಶನ್ ಕುಮಾರ್.ಸಿ.ಅಬಕಾರಿ ಪೇದೆ ಇವರು ಭಾಗವಹಿಸಿದ್ದರು.