ಚಳ್ಳಕೆರೆ : ತಾಲೂಕಿನ ತಪಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು.
ಮುಂಜಾನೆ
10 ಗಂಟೆಗೆ ಸರಿಯಾಗಿ
ಗ್ರಾಮದ ಯಜಮಾನರು ಭಕ್ತಾದಿಯಿಂದ ರಥೋತ್ಸವಕ್ಕೆ ಬಲಿ ಅನ್ನಹಾಕುವ ಮೂಲಕ ರಥೋತ್ಸವಕ್ಕೆ ಪೂಜೆ ಸಲ್ಲಿಸುತ್ತಾರೆ, ನಂತರ ಗ್ರಾಮದ ಭಕ್ತರು
ಹೂಮಾಲೆಗಳನ್ನು ಅರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಉಘೇ ಉಘೇ ಎನ್ನುತ್ತಾ ರಥೋತ್ಸವಕ್ಕೆ ಕೈ ಹಾಕಿದ ಭಕ್ತಾದಿಗಳು ಸುಮಾರು ದೂರದವರೆಗೆ ರಥವನ್ನು ಎಳೆದು ಪುನಿತರಾಗುತ್ತಾರೆ.
ಇನ್ನು ರಥೋತ್ಸವದ ಮುಂಭಾಗದಲ್ಲಿ ಭಕ್ತಾದಿಗಳು ನಂದಿಕೋಲು ಹಾಕುವ ಮೂಲಕ ನೋಡುಗರ ಕಣ್ಮಣ ಸೆಳೆಯುವ ದೃಶ್ಯ ಕಂಡು ಬಂದಿತು.
ರಥೋತ್ಸವದ ಮುಂದೆ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳು ಊಘೇ ಉಘೇ ಹರ್ಷೋದ್ಗರ ಮುಗಿಲು ಮುಟ್ಟಿತ್ತು..