ಚಳ್ಳಕೆರೆ :
ಜನರಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ-ಕಾಲೇಜುಗಳ ಯುವಕ ಯುವತಿಯರಿಗೆ ಅರಿವು ಮೂಡಿಸುವ ಮೂಲಕ ತಾಲೂಕಿನ ನಗರ ಪೊಲೀಸ್ ಠಾಣೆ ಪೊಲೀಸರು ಅಪರಾಧ ತಡೆ ಮಾಸಾಚರಣೆ ಆಚರಿಸಿದ್ದಾರೆ.
ನಗರದ ಬಳ್ಳಾರಿ ರಸ್ತೆಯಲ್ಲಿರುವ ಎಸ್ ಜೆ ಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಚಳ್ಳಕೆರೆ ಉಪ ವಿಭಾಗ, ಚಳ್ಳಕೆರೆ ಪೊಲೀಸ್ ಠಾಣೆವತಿಯಿಂದ ಅಪರಾಧ ತಡೆ ಮಸಾಚರಣೆ ದಿನಾಚರಣೆಯಲ್ಲಿ ಮಾತನಾಡಿದರು.
ಇಂದು ನೂರಾರು ಮಕ್ಕಳಿಗೆ ಜಾಗೃತಿ ಮೂಡಿಸುವ ಮೂಲಕ ಪೊಲೀಸರು ಅಪರಾಧ ತಡೆ ಮಾಸಚರಣೆ ದಿನಾಚರಣೆಯನ್ನು ಆಚರಿಸಿದಾರೆ.
ಇದರಂತೆ ಪೊಲೀಸ್ ಕಾನ್ಸ್ಟೇಬಲ್ ತಿಲಕ್ ರಾಜ್ ಮಾತನಾಡಿ ಸಾರ್ವಜನಿಕ ವಲಯದಲ್ಲಿ ತಮ್ಮ ರಕ್ಷಣೆಗೆ ಪೊಲೀಸರು ಸದಾ ಬೆನ್ನೆಲುಬಾಗಿರುತ್ತಾರೆ, ಇನ್ನು ಅಪರಾಧಗಳು, ಕಳ್ಳತನ, ದರೋಡೆ ವಂಚನೆ, ಇಂತಹ ಕ್ರಿಮಿನಲ್ ಪ್ರಕರಣಗಳು ನಿಮಗೆ ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ನಿಮ್ಮ ಗ್ರಾಮದಲ್ಲಿ, ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷವೇ ಪೊಲೀಸರಿಗೆ ಕರೆ ಮಾಡಬೇಕು, ಎಂದು ಜಾಗೃತಿ ಮೂಡಿಸಿದರು..
ಇದೇ ಸಂಧರ್ಭದಲ್ಲಿ
ಚಳ್ಳಕೆರೆ ಪೊಲೀಸ್ ಠಾಣೆಯ ಸಿಬ್ಬಂದಿ ತಿಲಕ್ ರಾಜ್ , ವೆಂಕಟೇಶ್, ಶ್ರೀಧರ್,
ಹಾಗೂ ಶಾಲೆಯ ಮುಖ್ಯ ಶಿಕ್ಷಕರು , ಸಹಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.