“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ ಅನುಸರಣೆ ಅಗತ್ಯ”:-ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ.
ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿ ಅವರು ಪ್ರತಿಪಾದಿಸಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಶಿವನಗರದ ತಮ್ಮ ನಿವಾಸದಲ್ಲಿ "ಮನೆ-ಮನೆಗೆ ಶಾರದಾಮಾತೆ" ಎಂಬ ಪ್ರಚಾರಾಂದೋಲನದಡಿ ಶ್ರೀಮಾತೆ ಶಾರದಾದೇವಿ ಅವರ 172ನೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು "ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ" ಬಗ್ಗೆ ಮಾತನಾಡಿದ ಅವರು ಶ್ರೀಮಾತೆ ಶಾರದಾದೇವಿ ಅವರ 'ನಿರಹಂಕಾರ,ಸದಾ ಕರ್ಮಶೀಲತೆ, ಸಹಿಷ್ಣುತೆ,ಸಹನೆ,ವಿಶ್ವವ್ಯಾಪಕ ಮಾತೃತ್ವ,ಅವರ ನಿಷ್ಕಲ್ಮಶ ವಾತ್ಸಲ್ಯ,ಪ್ರೀತಿ, ಕ್ಷಮಾಶೀಲತೆ, 'ನಿನಗೇನಾದರೂ ಶಾಂತಿ ಬೇಕಿದ್ದರೆ ಯಾರಲ್ಲೂ ದೋಷ ಕಾಣಬೇಡ.
ಒಂದು ವೇಳೆ ದೋಷವನ್ನು ಕಾಣುವುದಾದರೆ ನಿನ್ನ ದೋಷವನ್ನೇ ನೋಡಿಕೊ,ಈ ಇಡೀ ಜಗತ್ತನ್ನೇ ನಿನ್ನದನ್ನಾಗಿ ಮಾಡಿಕೊಳ್ಳಲು ಕಲಿತುಕೊ, ಇಲ್ಲಿ ಪರಕೀಯರೆಂಬವರು ಯಾರು ಇಲ್ಲ; ಈ ಇಡೀ ಜಗತ್ತೇ ನಿನ್ನದು ಮುಂತಾದ ಅವರ ಸಂದೇಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಉತ್ತಮ ಜೀವನ ನಮ್ಮದಾಗುತ್ತದೆ ಎಂದು ತಿಳಿಸಿದರು..
ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ದೇವಿಸ್ತುತಿ ಪಾರಾಯಣ”, “ಶ್ರೀಶಾರದಾದೇವಿ ಅವರ ಕುರಿತ ಭಜನಾ ಕಾರ್ಯಕ್ರಮ” ಹಾಗೂ ಶ್ರೀಮಾತೆ ಶಾರದಾದೇವಿ ಅವರ ಹೆಸರಿನಲ್ಲಿ “ಕೇಕ್ ಕತ್ತರಿಸಿ” ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ವೀರಮ್ಮ,ನಾಗರಾಜ್,ಸಂಗೀತ, ಶ್ರೀಮತಿ ಗೀತಾ ನಾಗರಾಜ್, ಶಾಂತಮ್ಮ,ಜಯಮ್ಮ, ಪಿ.ಎಸ್,ಮಾಣಿಕ್ಯ, ಯತೀಶ್ ಎಂ ಸಿದ್ದಾಪುರ,ಕವಿತಮ್ಮ,ಶೈಲಜ, ಕೃಷ್ಣವೇಣಿ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ನಾಗರತ್ನಮ್ಮ, ಗೀತಾಲಕ್ಷ್ಮೀ, ರಶ್ಮಿ ವಸಂತ, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು.