ಹೊಸದುರ್ಗ:
ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ
ಸಂಭ್ರಮಿಸಿದ ಮಹಿಳೆಯರು
ಹೊಸದುರ್ಗ ತಾಲೂಕಿನ ಹುರುಳಿ ಹಳ್ಳಿ ಗ್ರಾಮದಲ್ಲಿ ಸ್ನೇಹ
ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುಷ್ಪಗಿರಿ
ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘಗಳ ಸಾಂಸ್ಕೃತಿಕ
ಕ್ರೀಡಾಕೂಟ ಹಾಗೂ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರದಲ್ಲಿ
ಮಹಿಳೆಯರಿಗಾಗಿ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಿತ್ತು.
ಮಹಿಳೆಯರು ಹಗ್ಗ ಜಗ್ಗಾಟ, ವೀಲ್ ಚೇರ್, ಲೆಮನ್ ಇನ್ ಸ್ಪೂನ್
ಇನ್ನಿತರೇ ಗ್ರಾಮೀಣ ಕ್ರೀಡೆಗಳಲ್ಲಿ ಮಹಿಳೆಯರು ಉತ್ಸುಕರಾಗಿ
ಭಾಗವಹಿಸಿದ್ದರು.