ಚಿತ್ರದುರ್ಗ:
ಕರಡಿಗಳಿಗೆ ಎರಡನೇ ವರ್ಷದ ಹುಟ್ಟು
ಹಬ್ಬದ ಸಂಭ್ರಮ
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿರುವ ಆಡುಮಲ್ಲೇಶ್ವರ
ಕಿರು ಮೃಗಾಲಯದ ಎರಡು ಮುದ್ದಾದ ಕರಡಿ ಮರಿಗಳಿಗೆ 2ನೇ
ವರ್ಷದ ಹುಟ್ಟು ಹಬ್ಬ ಆಚರಿಸಿ ಅರಣ್ಯ ಇಲಾಖೆ ಅಧಿಕಾರಿಗಳು
ಮಾನವೀಯತೆ ತೋರಿದ್ದಾರೆ.
ಸೀನಮ್ಮ ಎಂಬ ಕರಡಿಯೊಂದು 2
ವರ್ಷಗಳ ಹಿಂದೆ, 2 ಹೆಣ್ಣು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಿಗೆ
ಭಾನು- ಭೂಮಿ ಎಂದು ನಾಮಕರಣ ಮಾಡಿದ್ದರು.
ಇದೀಗ
2ನೇ ವರ್ಷದ ಹುಟ್ಟುವನ್ನು ಇಂದು ಅರಣ್ಯಾಧಿಕಾರಿ ಅಕ್ಷತಾ
ನೇತೃತ್ವದಲ್ಲಿ, ಕರಡಿಗಳಿಗೆ ಕೇಕ್ ಕಟ್ ಮಾಡುವ ಮೂಲಕ ಬರ್ತ್
ಡೇ ಆಚರಿಸಿದ್ದಾರೆ.

