ಟೊಮೊಟೊ ಬೆಲೆಕುಸಿತ ರೈತ ಕಂಗಾಲು.
ನಾಯಕನಹಟ್ಟಿ : ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದ ರೈತ ಕರಿಬಸವರಾಜ್ ಬೆಳದ ಟೊಮೊಟೊಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ.
ಹೊಸ ಜೋಗಿಹಟ್ಟಿ ಗ್ರಾಮದ ತಮ್ಮ ಜಮೀನಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಮಾರು 3 ಎಕರೆ ಪ್ರದೇಶದಲ್ಲಿ ಟೊಮೊಟೊ ಸಸಿಗಳನ್ನು ಚಳ್ಳಕೆರೆಯ ನರ್ಸರಿಗಳಲ್ಲಿ ಖರೀದಿ ಮಾಡಿ ನೆಟ್ಟು, ಸಮಯಕ್ಕೆ ಸರಿಯಾಗಿ ಗೊಬ್ಬರ, ಔಷಧಿ ಸಿಂಪಡಣೆ ಮಾಡಿ ಹಣ್ಣು ಬಿಡಲು ಪ್ರಾರಂಭಿಸಿವೆ. ಆದರೆ ಮಾರುಕಟ್ಟೆಯಲ್ಲಿ 1 ಬಾಕ್ಸಿಗೆ 60 ರಿಂದ 70 ರೂಪಾಯಿಗಳ ದರ ನಿಗದಿಯಾಗಿರುವುದರಿಂದ, ಸುಮಾರು 4 ರಿಂದ 5 ಲಕ್ಷದವರೆಗೆ ಸಾಲ ಮಾಡಿ ಬೆಳೆಗೆ ಹೂಡಿಕೆ ಮಾಡಿದ್ದಾರೆ. ಬಂದಂತಹ ಹಣದಲ್ಲಿ ಸಾಲ ಮಾಡಿದ ಹಣಕ್ಕೆ ಬಡ್ಡಿ ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ. ಅದರಲ್ಲಿ ಟೆಂಪೋ ಬಾಡಿಗೆ ತೆಗೆದರೆ ನಮಗೆ ಏನು ಉಳಿಯುವುದಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

