ಚಿತ್ರದುರ್ಗ:
ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ
ಹಾಕಿದ ರೈತರು
ಚಿತ್ರದುರ್ಗದ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ
ಸಂಘದಿಂದ ರೈತರು ಜಿಲ್ಲಾಡಳಿತದ ವಿರುದ್ಧ ಗುರುವಾರ ಪ್ರತಿಭಟನೆ
ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿ
ಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಹೂವು ಕಾಯಿ
ಕಟ್ಟಿರುವುದಿಲ್ಲ.
ರೈತರು 1 ಎಕರೆಗೆ ಸುಮಾರು 35-40 ಸಾವಿರ
ಖರ್ಚು ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕೃಷಿ ಇಲಾಖೆ
ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ
ಒತ್ತಾಯಸಿದ್ದಾರೆ.