ಚಳ್ಳಕೆರೆ : ಪೋಲಿಸ್ ರೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯ ಕೇವಲ ಪೊಲೀಸ್ ರು ಇದ್ದರೆ ಎನ್ನುವುದು ಬೇಡ, ಅಪರಾಧ ಕೃತ್ಯಗಳು ಕಂಡು ಬಂದರೆ ಪೊಲೀಸ್ ರಿಗೆ ಮಾಹಿತಿ ನೀಡಿ ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು.
ಅವರು ನಗರದ ವಾಲ್ಮೀಕಿ ವೃತ್ತದಲ್ಲಿ ಸಾರ್ವಜನಿಕರು, ಹಾಗೂ ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಪರಾಧ ತಡೆ ಮಾಸಾಚರಣೆಯಲ್ಲಿ ಜಾಗೃತಿ ಮೂಡಲಾಗುವುದು ಸಾರ್ವಜನಿಕರು ಕಲವು ಜಾಗೃತಿ ಸೂಚನೆಗಳನ್ನು ಅನುಸರಿಸುವ ಮೂಲಕ ಅಪರಾಧ ತಡೆಗಾಗಿ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ ಎಂದರು
ಇದೇ ಸಂಧರ್ಭದಲ್ಲಿ ಪೊಲೀಸ್ ಠಾಣೆ ಯ ಪಿಐ ಆರ್ ಎಪ್ ದೇಸಾಯಿ, ಪಿಎಸ್ಐ ಕೆ.ಸತೀಶ್ ನಾಯ್ಕ್, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.