ಚಳ್ಳಕೆರೆ :
ವಾಲ್ಮೀಕಿ ಮ್ಯಾಸ ನಾಯಕರು ಕಾಡುಗೊಲ್ಲರು ಮತ್ತು ರೆಡ್ಡಿ ಜನಾಂಗದವರು ಸೇರಿ ಆಚರಿಸುವಂತಹ ಈ ಒಂದು ಧಾರ್ಮಿಕ ವಿಧಿ ವಿಧಾನಗಳು ಸಮಾಜದಲ್ಲಿ ಸಾಮರಸ್ಯಕ್ಕೆ ಪ್ರತಿಬಿಂಬವಾಗಿವೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ನಾಯಕನಹಟ್ಟಿ ಹೋಬಳಿಯ ಹಿರೇಕೆರೆ ಕಾವಲಿನಲ್ಲಿ ಶ್ರೀ ಭೋಸೇ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪೂಜೆ ಸಲ್ಲಿಸಿ ಮಾತನಾಡಿ ಚಿತ್ರದುರ್ಗದ ಮೊಣಕಾಲ್ಮೂರು ಮತ್ತು ಚಳಕೆರೆ ತಾಲ್ಲೂಕುಗಳು ಈ ಆಚರಣೆಗಳಿಂದ ಕಾರ್ಮಿಕ ನೆಲೆನಾಡಾಗಿ ಹೊರಹೊಮ್ಮಿದೆ ವರ್ಷಪೂರ್ತಿ ತಾಲೂಕುಗಳಲ್ಲಿ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತದೆ ಕಠಿಣವಾದ ವ್ರತ ದೊಂದಿಗೆ ಭಕ್ತಾದಿಗಳು ಈ ಸ್ವಾಮಿಯನ್ನು ಆರಾಧಿಸುತ್ತಾರೆ
ಹಾಗಾಗಿ ಈ ಭಾಗಗಳಲ್ಲಿ ಹೆಚ್ಚು ಹೆಚ್ಚು ಸಾಮರಸ್ಯ ಉಳಿದುಕೊಂಡಿದೆ ಧರ್ಮದ ದಾರಿಯಲ್ಲಿ ಮತ್ತು ಸತ್ಯದ ದಾರಿ ಯಲ್ಲಿ ಬಹುಪಾಲು ಜನ ನಡೆದುಕೊಳ್ಳುತ್ತಾರೆ ಹಾಗಾಗಿ ಬೇರೆ ತಾಲೂಕುಗಳಿಗೆ ಮತ್ತು ಜಿಲ್ಲೆಗಳಿಗೆ ಈ ಭಾಗದ ಜನರು ಮಾದರಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ಜನಜೀವನ ಉತ್ಕೃಷ್ಟ ಗೊಳಿಸಲು ಬೊಸೆ ರಂಗಸ್ವಾಮಿಯವರ ಆಶೀರ್ವಾದ ಮತ್ತು ಪ್ರೇರೇಪಣೆ ಭಕ್ತಾದಿಗಳ ಮೇಲಿರಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಮುದಿಯಪ್ಪ, ನಲಕೇತನ ಹಟ್ಟಿಯ ಮುತ್ತಯ್ಯ ಮತ್ತು ಸಹಸ್ರ ಭಕ್ತಾದಿಗಳು ಉಪಸ್ಥಿತರಿದ್ದರು