ಚಳ್ಳಕೆರೆ :
ಚಳ್ಳಕೆರೆ: ಅಲೆಮಾರಿಗಳಿಗೆ ನಿವೇಶನ ಕೊಡಿ
ಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ಅಲೆಮಾರಿ ಜನಾಂಗದವರಿಗೆ
ನಿವೇಶನ ನೀಡುವಂತೆ ಒತ್ತಾಯಿಸಿ, ಪಟ್ಟಣ ಪಂಚಾಯಿತಿ
ಮುಖ್ಯಾಧಿಕಾರಿ ಶ್ರೀನಿವಾಸ್ ಗೆ ಅಲೆಮಾರಿ ಜನಾಂಗದವರು
ಇಂದು ಮನವಿ ಸಲ್ಲಿಸಿದರು.
ವಾರ್ಡ್ ನಂ. 14 ರಲ್ಲಿ 34 ರಿಂದ 40
ವರ್ಷಗಳಿಂದ ಅಲೆಮಾರಿಗಳು ವಾಸಿಸುತ್ತಿದ್ದು, ನಿವೇಶಮವಿಲ್ಲದೆ
ಬಟ್ಟೆ ಗುಡಾರಗಳನ್ನು ಹಾಕಿಕೊಂಡು ವಾಸು ಮಾಡುತ್ತಿದ್ದು, ನಮಗೆ
ನಿವೇಶನದ ಜೊತೆಗೆ ಪಪಂ ನಿಂದ ಮೂಲಭೂತ ಸೌಕರ್ಯಗಳನ್ನು
ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.