ಚಳ್ಳಕೆರೆ :
ಹೊಳಲ್ಕೆರೆ: ಜೀವ ರಕ್ಷಣೆಗಾಗಿ ಎಸ್ಪಿ ಕಚೇರಿ ಬಾಗಿಲ
ಎಡತಾಕಿದ ಜೋಡಿ
ಹೊಳಲ್ಕೆರೆಯ ಯುವ ಜೋಡಿಯೊಂದು ಪ್ರೇಮಿಸಿ ಮನೆವಯರ
ವಿರುದ್ಧ ನಿಂತು ಮದುವೆಯಾಗಿದ್ದು, ಇದೀಗ ತಮಗೆ ರಕ್ಷಣೆ ಬೇಕು
ಎಂದು ಇಂದು ಚಿತ್ರದುರ್ಗ ಪೊಲೀಸ್ ಕಚೇರಿಯ ಬಾಗಿಲು
ಎಡತಾಕಿದೆ.
ರಾಧಿಕಾ ಮತ್ತು ಜಯಸ್ವಾಮಿ ಇಬ್ಬರು ಪರಿಚಯವಾಗಿ
ಪರಿಚಯ ಪ್ರೀತಿಗೆ ತಿರುಗಿತ್ತು. ಡಿ. 6 ರಂದು ಒಬ್ಬರನ್ನೊಬ್ಬರು
ಮದುವೆಯಾಗಿದ್ದಾರೆ.
ಆದರೆ ಹುಡುಗಿಯ ಪೋಷಕರು ಇಬ್ಬರಿಗೂ
ಪ್ರಾಣ ಭಯವನ್ನು ಹಾಕಿದ್ದಾರೆ. ಇದರಿಂದ ಭಯ ಭೀತರಾದ ಯುವ
ಜೋಡಿ ತಮಗೆ ರಕ್ಷಣೆ ಬೇಕೆಂದು ಎಸ್ಪಿ ರನ್ನು ಭೇಟಿಮಾಡಿ ಮನವಿ
ಮಾಡಿದ್ದಾರೆ.