filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 50;

ಚಳ್ಳಕೆರೆ :

ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಸ್ಮರಣೆ ಎಂಬುದು ಒಂದು ಖಾಯಿಲೆಯಾಗಿದೆ ಎಂದು ಹೇಳಿಕೆಯನ್ನು ಕಟ್ಟಿಸಿ ಈ ಕೂಡಲೇ ಗೃಹ ಖಾತೆಯಿಂದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ
ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ

ನಗರದ ಡಾ‌ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಚಳ್ಳಕೆರೆ ತಾಲ್ಲೂಕು ಛಲವಾದಿ
ಕ್ಷೇಮಾಭಿವೃದ್ಧಿ ಸಂಘದಿಂದ
ಅಂಬೇಡ್ಕರ್ ಪುತ್ತಳಿಗೆ ಪುಷ್ಪ ಮಾಲೆ ಅರ್ಪಿಸಿ ತದನಂತರ ಅಮಿತ್ ಶಾ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವ ಮೂಲಕ ಹಾಗೂ ಬೆಂಕಿಯಿಂದ ಸುಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸಮುದಾಯದ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿಯಾದ ದೇವರಾಜ್, ಮಾತನಾಡಿ,
ಸಾಮಾಜಿಕ, ಆರ್ಥಿಕ, ರಾಜಕೀಯ
ನ್ಯಾಯವನ್ನು ಒದಗಿಸುತ್ತಾ, ದೇಶದ ಸಮಗ್ರತೆ ಮತ್ತು ಏಕತೆಗಾಗಿ ಸರ್ವತಂತ್ರ ಪ್ರಜಾತಂತ್ರ
ಭಾತವನ್ನು ನಿರ್ಮಾಣ ಮಾಡಲು ಎಲ್ಲರಲ್ಲಿ ಸಮಾನತೆ,
ಮೂಡಿಸಲು
ಭಾತೃತ್ವ ಏಕತಾ ಭಾವನೆಯನ್ನು
ಸರ್ವೋಜನೋ ಸುಖಿನೋಭವಂತು ಎಂಬುವ ತಾತ್ವಿಕ ನುಡಿಗಟ್ಟಿನಲ್ಲಿ, ಇರುವ ಡಾ.ಬಿಆರ್.ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಗೃಹಸಚಿವರು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಓಂಕಾರಮೂರ್ತಿ ಮಾತನಾಡಿ,
ಭಾರತ
ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್‌ರವರನ್ನು
ಸಂವಿಧಾನದಲ್ಲಿರುವ ಭಾರತ ಚುನಾವಣೆ ಆಯೋಗದ ಮೂಲಕವೇ ಪ್ರಜೆಗಳಿಂದ, ಪ್ರಜೆಗಳಿಗಾಗಿ,
ಪ್ರಜೆಗಳಿಗೋಸ್ಕರ ಚುನಾಯಿತರಾಗಿರುವ ಕೇಂದ್ರ ಗೃಹ ಸಚಿವರಾಗಿರುವ ಅಮಿತ್
ಷಾ
ರವರು ಡಿ. 18 ರಂದು ಸಂಸತ್ತಿನ ಕಾರ್ಯಕಲಾಪಗಳಲ್ಲೇ ಅಂಬೇಡ್ಕರ್
ನಾಮವನ್ನು ಉಚ್ಚರಿಸುವ ಬದಲು ದೇವರ ನಾಮವನ್ನೇ ಉಚ್ಚರಿಸಿದ್ದರೆ ಜನ್ಮಗಳವರೆಗೆ ಸ್ವರ್ಗ
ಪ್ರಾಪ್ತಿಯಾಗುತ್ತಿತ್ತೆಂದು ಅಂಬೇಡ್ಕರ್ ಸ್ಮರಣೆಯನ್ನು
ವ್ಯಸನಿಗಳೆಂದು ತುಚ್ಚಕರಿಸಿ ಮಾತನಾಡಿದ ರೀತಿಯನ್ನು ಖಂಡಿಸುತ್ತಿದ್ದೇವೆ ಎಂದು ಒತ್ತಾಯಿಸಿದರು.

ಇನ್ನೂ ಚೌಳೂರು ಪ್ರಕಾಶ್, ಮಾತನಾಡಿ, ಅಮಿತ್ ಷಾರವರಿಗೆ
ಅಲ್ಲದೇ ಯಾವತ್ತೂ ಭಾರತಕ್ಕೆ ಶೋಭೆ ತರುವಂತಿಲ್ಲ ಎಂದು ಅವರ ನುಡಿಗಳನ್ನು ಖಂಡುಸುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ ತಾಲ್ಲೂಕು ಛಲವಾದಿ
ಕ್ಷೇಮಾಭಿವೃದ್ಧಿ ಸಂಘ (ರಿ)
ಸಂಘದ ಪದಾಧಿಕಾರಿಗಳು, ಓಂಕಾರಮೂರ್ತಿ, ದೇವರಾಜ್, ದೊಡ್ಡಲಿಂಗಪ್ಪ, ನಿಜಲಿಂಗಪ್ಪ, ಟಿ.ವಿಜಯ್ ಕುಮಾರ್, ಚೊಳೂರು ಪ್ರಕಾಶ್, ದ್ಯಾವರನಹಳ್ಳಿ ಆನಂದ್, ನನ್ನಿವಾಳ ನಾಗರಾಜ್, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಹಳೆನಗರದ ವೀರಭದ್ರಪ್ಪ,
ರಾಮಕೃಷ್ಣ , ರಂಗನಾಥ್, ಸೈಯದ್, ಮುಡ್ಲಗಿರಿಯಪ್ಪ, ಕುಶಾಲ್, ಮೈತ್ರಿ ದ್ಯಾಮಣ್ಣ , ಅನ್ನಪೂರ್ಣ ,, ಲಕ್ಷ್ಮೀದೇವಿ, ಮಂಜುಳಮ್ಮ, ಹೊನ್ನೂರ ಸ್ವಾಮಿ, ಕೆಂಚಣ್ಣ ಹಾಗೂ‌ ಮತ್ತಿತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!