ಚಳ್ಳಕೆರೆ;

ಮಧ್ಯ ಕರ್ನಾಟಕವೆಂದು ಹೆಸರುವಾಸಿಯಾಗಿ ಜಾತ್ರಾ ಮಹೋತ್ಸವ ನೆರವೇರಿಸಿಕೊಳ್ಳುವ ಗೌರಸಮುದ್ರ ಮಾರಮ್ಮ ದೇವಿ ನೆಲೆಸಿರುವ ಗೌರಸಮುದ್ರ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯಗಳು ಬೇಕಿದೆ.

ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಗ್ರಾಮದ ಮಧ್ಯ ಭಾಗದಲ್ಲಿ ಶೌಚಾಲಯಗಳ ನೀರು ಹರಿಯುತ್ತಿದೆ. ತಗ್ಗುಗುಂಡಿಗಳಾಗಿರುವ ಗ್ರಾಮದ ರಸ್ತೆ ಮಧ್ಯದಲ್ಲಿ ಕೊಳಚೆ, ಮಳೆ ನೀರು ನಿಂತು ವಿಪರೀತ ವಾಸನೆ ಮತ್ತು ಸೊಳ್ಳೆಗಳ ತಾಣವಾಗಿದೆ. ಗ್ರಾಮದ ರಸ್ತೆ ಅಗಲೀಕರಣ ಮತ್ತು ಸುಸಜ್ಜಿತ ಚರಂಡಿಗಳ ಅನುಕೂಲ ಆಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಚಳ್ಳಕೆರೆ ತಾಲೂಕು ಕೇಂದ್ರದಿಂದ 3೦ ಕಿಮೀ ದೂರ ಇರುವ ಗೌರಸಮುದ್ರ ಗ್ರಾಮದಲ್ಲಿ ಬಹುತೇಕ ಎಸ್ಸಿ-ಎಸ್ಟಿ ಜನಾಂಗ ಸೇರಿದಂತೆ ಇತರೆ ಒಟ್ಟು 4 ಸಾವಿರ ಜನಸಂಖ್ಯೆ ಇದೆ. ಕೂಲಿಯಿಂದ ಜೀವನ ಮಾಡುವ ಕುಟುಂಬಗಳು ಹೆಚ್ಚಾಗಿವೆ. .

ನಿವೇಶನರಹಿತ ಕುಟುಂಬಗಳಿಗೆ ಗ್ರಾಮ ಹೊರವಲಯದ ಗೋಮಾಳ ಭೂಮಿಯಲ್ಲಿ ನಿವೇಶನ ವ್ಯವಸ್ಥೆ ಕಲ್ಪಿಸುವಂತೆ ಬಹುವರ್ಷಗಳ ಬೇಡಿಕೆ ಈಡೇರುತ್ತಿಲ್ಲ ಎನ್ನುವುದು ಸ್ಥಳೀಯರ ಅಳಲು.

ಸ್ಥಳೀಯ ಪಂಚಾಯಿತಿಯಿಂದ ವಸತಿ ರಹಿತ ಕುಟುಂಬಗಳಿಗೆ ಸುಮಾರು ವರ್ಷಗಳಿಂದ ಸೌಲಭ್ಯ ಸಿಗುತ್ತಿಲ್ಲ. ಶೌಚಾಲಯಗಳ ವ್ಯವಸ್ಥೆಯೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

About The Author

Namma Challakere Local News
error: Content is protected !!