“ಭಗವದ್ಗೀತೆ ಎನ್ನುವುದು ವಿಶ್ವಮಾನ್ಯ ಪುಸ್ತಕ”:-ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ.

ಚಳ್ಳಕೆರೆ:- “ಶ್ರೀಕೃಷ್ಣನಿಂದ ಅರ್ಜುನನಿಗೆ ನಿಮಿತ್ತವಾಗಿ ಬೋಧಿಸಲ್ಪಟ್ಟ ಭಗವದ್ಗೀತೆ ಎನ್ನುವುದು ವಿಶ್ವಮಾನ್ಯ ಗ್ರಂಥವಾಗಿದ್ದು ಅದರಲ್ಲಿನ ಜೀವನ ತತ್ವಗಳ ಅನುಸರಣೆ ಅಗತ್ಯವಾದದ್ದು” ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ “ಶ್ರೀಗೀತಾ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು “ವಿಶ್ವದಲ್ಲಿ ಭಗವದ್ಗೀತೆ ಗ್ರಂಥವೊಂದಕ್ಕೆ ಮಾತ್ರ ಹುಟ್ಟುಹಬ್ಬ ಇದೆ”.ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಮಾರ್ಗಶೀರ್ಷ ಶುಕ್ಲ ಏಕಾದಶಿಯ ಪುಣ್ಯದಿನದಂದು ಭಗವದ್ಗೀತೆಯನ್ನು ಬೋಧಿಸಿದನು.ಆ ಪರ್ವದಿನವನ್ನೇ “ಗೀತಾ ಜಯಂತಿ” ಎಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಈ ಭಗವದ್ಗೀತೆ ಎನ್ನುವುದು ಸಾಕ್ಷಾತ್ ಭಗವಂತನ ವಾಣಿಗಳಾಗಿದ್ದು ಅವುಗಳನ್ನು ಕೇಳುವ ಮತ್ತು ಓದುವ ಹವ್ಯಾಸವನ್ನು ಭಕ್ತರು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಗೀತಾ ಜಯಂತಿಯ ಪ್ರಯುಕ್ತ “ಸಾಮೂಹಿಕ ಗೀತಾ ಪಠಣ” ಕಾರ್ಯಕ್ರಮವು ನಡೆಯಿತು.

ಈ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಟಿ.ಎಂ‌.ವಿಜಯಕಲಾ ಚಳ್ಳಕೆರೆ,ಡಿ.ಕಾವೇರಿ, ದೊಡ್ಡಜ್ಜಯ್ಯ, ಸುಮನ ಕೋಟೇಶ್ವರ ,ಶ್ರೀಮತಿ ಯಶೋಧಾ ಪ್ರಕಾಶ್, ವನಜಾಕ್ಷಿ, ಗೀತಾ ನಾಗರಾಜ್, ಗಂಗಾಂಬಿಕೆ, ಡಾ.ಬಸವರಾಜಪ್ಪ, ಗೀತಾ ವೆಂಕಟೇಶರೆಡ್ಡಿ, ನಾಗರತ್ನಮ್ಮ , ವಿಜಯಲಕ್ಷ್ಮಿ ರಶ್ಮಿ ರಮೇಶ್ ,ರಶ್ಮಿ ,ಅನಿತಾ, ಯತೀಶ್ ಎಂ ಸಿದ್ದಾಪುರ, ಮಾಣಿಕ್ಯ ಸತ್ಯನಾರಾಯಣ, ಆಶಾ ನಾಗರಾಜ್,ರತ್ನಮ್ಮ, ಎಸ್,ಎಂ, ಗೀತಾ,ವಿನುತ ನಂದರಾಜ, ಡಾ.ಭೂಮಿಕ, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!