“ಹನುಮನ ರಾಮಭಕ್ತಿ ಆಧ್ಯಾತ್ಮಿಕ ಸಾಧಕರಿಗೆ ಅನುಕರಣೇಯ”:- ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ:- ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರವೆಂದರೆ ಅದು ಹನುಮಂತನದು, ಆತನು ರಾಮನ ಮೇಲಿಟ್ಟಿದ್ದ ಭಕ್ತಿ ಆಧ್ಯಾತ್ಮಿಕ ಸಾಧಕರಿಗೆ ಅನುಕರಣೇಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಹನುಮ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಹನುಮಂತನ ಅನೇಕ ಗುಣಗಳು ನಮ್ಮ ಸಾಧನಾ ಸಮಯದಲ್ಲಿ ನೆರವಾಗುತ್ತವೆ,ಆತನ ಧೈರ್ಯ,ಸಾಹಸ ಪ್ರವೃತ್ತಿ,ರಾಮ,ಲಕ್ಷೃಣ,ಸೀತೆಯ ಮೇಲಿಟ್ಟಿದ್ದ ಪೂಜ್ಯ ಭಾವನೆ ಎಲ್ಲವೂ ಅನುಸರಿಸಲು ಯೋಗ್ಯವಾದ ವಿಚಾರಗಳು ಎಂದು ತಿಳಿಸಿದರು.
.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಆಂಜನೇಯನ ಕುರಿತಾದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.ಈ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಭಾರತಿ,ವನಜಾಕ್ಷಿ ಮೋಹನ್,ರಶ್ಮಿ ವಸಂತ,ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಗೀತಾ ನಾಗರಾಜ್,ಸುಮನ ಕೋಟೇಶ್ವರ, ಮಾಣಿಕ್ಯ ಸತ್ಯನಾರಾಯಣ, ಮಂಜುಳ ಉಮೇಶ್,ಪಂಕಜ, ಚೆನ್ನಕೇಶವ,ಸುಕೃತಿ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.