ಚಳ್ಳಕೆರೆ :
ಮಾದಿಗ ಸಮುದಾಯದ ಮೂರು ದಶಕದ ಹೋರಾಟದ
ಫಲವಾಗಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ
ಮಾಡಲು ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ.
ಈ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ ಒಳ ಮೀಸಲಾತಿ
ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ನಮ್ಮ
ರಾಜ್ಯದಲ್ಲೂ ಸರ್ಕಾರ ಸಚಿವ ಸಂಪುಟದಲ್ಲಿ ಒಳ
ಮೀಸಲು ಜಾರಿಗೆ ನಿರ್ಣಯ ಕೈಗೊಳ್ಳಬೇಕು. ಒಳ
ಮೀಸಲು ಜಾರಿ ಆಗುವ ತನಕ ಎಲ್ಲ ಹುದ್ದೆಗಳ ನೇಮಕಾತಿ
ತಡೆಹಿಡಿಯಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನೆ ಮುಂದೆ ಧರಣಿ ನಡೆಸಿ ಹಕ್ಕೊತ್ತಾಯಗಳನ್ನು ಮನವಿ ಮೂಲಕ ಸಲ್ಲಿಸಿದರು
ವಿಧಾನಸಭಾ ಕ್ಷೇತ್ರದ ಬಹು ಸಂಖ್ಯಾ
ಮಾದಿಗರಾದ ನಾವುಗಳು ಪರಿಶಿಷ್ಟರ ಒಳ ಮೀಸಲಾತಿಯನ್ನು ಆಯಾ ಜನಸಂಖ್ಯೆಗೆ ಅನುಗುಣವಾಗಿ
ಹಂಚಿ ಮಾಡಬೇಕೆಂದು ಸುಮಾರು 30 ವರ್ಷಗಳಿಂದ ಹೋರಾಟ
ಮಾಡುತ್ತಿರುವ ವಿಷಯವನ್ನು
ಗಮನಿಸಿರುತ್ತೀರೆಂದು ಭಾವಿಸುತ್ತೇವೆ.
2003 ರ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ
ಬಹುದೊಡ್ಡ ಮಟ್ಟದಲ್ಲಿ ಎಸ್.ಸಿ/ಎಸ್.ಟಿ ಸಮಾವೇಶವನ
ನಡೆಸಿದ್ದೀರಿ. ಈ ಸಮಾವೇಶದಲ್ಲಿ ನಿಮ್ಮ ಪಕ್ಷದ
ಘಟಾನುಘಟಿ ನಾಯಕರು ಸೇರಿ ನಮ್ಮ ಪಕ್ಷ ಅಧಿಕಾರಕ್ಕೆ
ಬಂದ
ಮೊದಲನೆ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು
ಜಾರಿಗೆ ಮಾಡುತ್ತೇವೆಂದು ಬರವಸೆ ನೀಡಿರುತ್ತಾರೆ.
ಆ ಭರವಸೆಯನ್ನು ಒಪ್ಪಿಕೊಂಡ ಬಹು ಸಂಖ್ಯಾತ ಮಾದಿಗ
ಸಮುದಾಯವು 2023 ರ ಚುನಾವಣೆಯಲ್ಲಿ ತನ
ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸಿ ನಿಮ್ಮ ಪಕ್ಷಕ್ಕೆ
ಅಧಿಕಾರ ನೀಡಿದ್ದೇವೆ. ಚುನಾವಣೆ ಮುಗಿದು ಕಾಂಗ್ರೆಸ್
ಪಕ್ಷ
ಅಧಿಕಾರಕ್ಕೆ ಬಂದು 2 ವರ್ಷ ಕಳೆಯುತ್ತಾ ಬಂದರೂ ಕೊಟ್ಟಬರವಸೆಯನ್ನು ಈಡೇರಿಸದೇ ಮೌನವಾಗಿರುವುದು
ಮಾದಿಗ ಸಮುದಾಯ. ಅಂಕ ಮತ್ತು ಕಾಂಗ್ರೆಸ್ ಪಕ್ಷವು
ಬಹು ಸಂಖ್ಯಾತ ಮಾದಿಗರಿಗೆ ಮೋಸ ಮಾಡುವ
ಉದ್ದೇಶದಿಂದಲೇ ಮೌನವಾಗಿದೆ ಎಂದು ಭಾವಿಸುತ್ತೇವೆ.
ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ಇದೆ ಎಂದು ತೀರ್ಪು
ನೀಡಿದೆ. ಈ ತೀರ್ಮ ಹೊರ ಬೀಳುತ್ತಿದ್ದಂತೆಯೇ ಒಳ
ಮೀಸಲಾತಿ ಜಾರಿ ಮಾಡದೆ, ಸರ್ಕಾರಿ ನೇಮಕಾತಿ
ಪ್ರಕ್ರಿಯೆಯನ್ನು ಪ್ರಾರಂಭಿಸಲು ಮುಂದಾಗಿರುವ ನಿಮ್ಮ
ಸರ್ಕಾರದ ಬಗ್ಗೆ ನಮಗೆ ನಂಬಿಕೆ ಇಲ್ಲದಂತಾಗಿದೆ.
ನಾವುಗಳು ಹೆಚ್ಚಿನ ಮತ ನೀಡಿ. ನಿಮ್ಮ ಗೆಲುವಿಗೆ
ಕಾರಣರಾಗಿದ್ದೇವೆ. ಹಾಗಾಗಿ ತಾವುಗಳು ಈ ಎಲ್ಲಾ
ವಿಷಯಗಳನ್ನು ಗಮನಿಸಿ, ಒಳ ಮೀಸಲಾತಿ ಜಾರಿ ಬಗ್ಗೆ
ಚರ್ಚಿಸಿ, ತೀರ್ಮಾನ ಕೈಗೊಳ್ಳಲು ತಾವು ಶ್ರಮ
ವಹಿಸಬೇಕೆಂದು ತಮ್ಮ ಮನೆಯ ಮುಂದೆ ತಮಟೆ’
ಚಳುವ
ಮಾಡುವುದರ ಮುಖಾಂತರ ಪ್ರತಿಭಟನೆ
ಹಮ್ಮಿಕೊಂಡಿದ್ದು ಈಗಲಾದರೂ ಒಳಮೀಸಲಾತಿ
ಜಾರಿಗೊಳಿಸುವಂತೆ ಸರಕಾರಕ್ಕೆ ಒತ್ತಾಯಿಸುವಂತೆ
ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾತಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ
ಧ್ಯಾವರನಹಳ್ಳಿತಿಪ್ಪೇಸ್ವಾಮಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ವಿಜಯ್
ಕುಮಾರ್, ಡಿ.ದಯಾನಂದ್, ದ್ಯಾವರನಹಳ್ಳಿ ಸುರೇಶ್, ನಾಗರಾಜ್, ಭದ್ರಿ, ಇತರರಿದ್ದರು.