ಚಳ್ಳಕೆರೆ :
ಶೇಂಗಾ ಬಿಡಿಸುವ ಯಂತ್ರದ ವಾಹನ ದ್ವಿಚಕ್ರ ವಾಹನ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು.
ಚಳ್ಳಕೆರೆ

ಶೇಂಗಾ ಬಿಡಿಸುವ ಯಂತ್ರದ ವಾಹನ ಎಕ್ಸೆಲ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಸೋಮನಾಥ ಎನ್ನುವ ವ್ಯಕ್ತಿ ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಸಂಜೆ 6.30 ಸಮಯದಲ್ಲಿ ನಡೆದಿದೆ .

ಚಳ್ಳಕೆರೆ ತಾಲೂಕಿನ ಬೆಳಗೆರೆ ಹಾಗೂ ನಾರಾಯಣಪುರ ಗ್ರಾಮದ ಮಧ್ಯದಲ್ಲಿ ಈ ಘಟನೆ ನಡೆದಿದ್ದು.

ಕೆ.ಟಿ ಹಳ್ಳಿ ಹಳ್ಳಿ ಗ್ರಾಮದ ಸೋಮನಾಥ (45 ) ವರ್ಷ ಹಲವು ವರ್ಷಗಳಿಂದ ಇವರ ಮಾವ ಮಂಜಣ್ಣ ಮನೆಯಲ್ಲಿ ವಾಸವಾಗಿದ್ದು ನಾರಾಯಣಪುರದಲ್ಲಿ ಮೋಟರ್ ಡಿವೈಂಗ್ ಮಾಡಿಕೊಂಡಿದ್ದು ಇಂದು ಸಂಜೆ ತನ್ನ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ನಾರಾಯಣಪುರದಿಂದ ಬೆಳಗೆರೆ ಗ್ರಾಮಕ್ಕೆ ಬರುತ್ತಿರುವಾಗ ಶೇಂಗಾ ಬಿಡಿಸುವ ಯಂತ್ರದ ವಾಹನದ ಚಾಲಕ ಎಕ್ಸೆಲ್ ವಾಹನಕ್ಕೆ ಡಿಕ್ಕಿ ಪಡಿಸಿ ಪರರಿಯಾಗಲು ಯತ್ನಿಸಿದ್ದಾನೆ.

ವಿಷಯ ತಿಳಿದು ಬೆಳಗೆರೆ ಗ್ರಾಮದ ಯುವಕರು ವಾಹನವನ್ನು ಹಿಂಬಾಲಿಸಿ ಹೋಗಿ ಚಾಲಕನನ್ನು ಹಿಡಿದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ .ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Namma Challakere Local News
error: Content is protected !!