ಲೋಕ ಅದಾಲತ್ತನಿಂದ :ವ್ಯಾಜ್ಯ ಮುಕ್ತ ಸಮಾಜ ನಿರ್ಮಿಸಿ : K,M ನಾಗರಾಜ್ ,
ಚಳ್ಳಕೆರೆ
ಲೋಕ ಅದಾಲತ್ ಅನ್ನುವುದು ವ್ಯಾಜ್ಯಮುಕ್ತ ಸಮಾಜ ನಿರ್ಮಿಸುವಲ್ಲಿ ಕಕ್ಷಿದಾರರು ರಾಜಿ ಸಂಧಾನದ ಮೂಲಕ ತಮ್ಮ ಕೇಸುಗಳನ್ನು ಇತ್ಯರ್ಥ ಗೊಳಿಸುವುದರಿಂದ ಶಾಂತಿ, ನೆಮ್ಮದಿ ,ಸಮಯ, ದುಡ್ಡು , ಉಳಿಸಿಕೊಂಡು ನೆಮ್ಮದಿಯ ಜೀವನದತ್ತ ಸಾಗಿ ಎಂದು ವಕೀಲರ ಸಂಘದ ಅಧ್ಯಕ್ಷ ಕೆಎಂ ನಾಗರಾಜ್ ಕಕ್ಷಿಧಾರಿಗೆ ಕಿವಿಮಾತು ಹೇಳಿದರು ,
ಇವರು ನಗರದ ಸೋಮುಗುದ್ದು ರಸ್ತೆಯಲ್ಲಿ ಬರುವ ಕೋರ್ಟ್ ಆವರಣದಲ್ಲಿ ಲೋಕ ಅದಾಲತ್ ಕುರಿತು ಮಾತನಾಡಿದ ಇವರು,
ಇತ್ತೀಚಿನ ದಿನಮಾನಗಳಲ್ಲಿ ಕಕ್ಷಿದಾರರು ತಮ್ಮ ಸೇಡಿನ ಜೀವನದ ಜೊತೆ ತಮ್ಮ ವ್ಯಾಜ್ಯಗಳಿಗೆ ಒಳಗಾಗಿ ವರ್ಷಗಟ್ಟಲೆ ಕೋರ್ಟಿಗೆ ಅಲೆದಾಡಿ ತಮ್ಮ ಜೀವನವನ್ನು ಜಿಗುಪ್ಸೆ ಗೊಳಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ ಅಲ್ಲದೆ ದೇಶಾದ್ಯಂತ ಎಲ್ಲಾ ಕೋರ್ಟುಗಳಲ್ಲಿ ರಾಜಿ ಮೇಳ ನಡೆಯುತ್ತಿದ್ದು ಇಂತಹ ರಾಗಿ ಮೇಳಕ್ಕೆ ಕಕ್ಷಿದಾರರು ಭಾಗವಹಿಸಿ ತಮ್ಮ ಕೇಸುಗಳನ್ನು ರಾಜಿ ಮೂಲಕ ಸಂಧಾನ ಮಾಡಿಕೊಂಡು ಪ್ರೀತಿ ಪ್ರೇಮ ದ್ವೇಷ ಮರೆತು ನೈತಿಕ ಜೀವನದತ್ತ ನಡೆಯಬೇಕಾಗಿದೆ,
ಅಲ್ಲದೆ ಒಂದು ಬಾರಿ ರಾಜಿ ಸಂಧಾನ ವಾದಲ್ಲಿ ಮೇಲ್ ಕೋರ್ಟಿಗೆ ಅಫೀಲ್ ಹೊಗಳಿಕೆ ಆಗುವುದಿಲ್ಲ ಹಾಗೂ ಸಣ್ಣಪುಟ್ಟ ಹಣದ ವಿಷಯಕ್ಕಾಗಿ ಕೋರ್ಟ್ ಮೆಟ್ಟುಲೇರಿ ವರ್ಷಗಟ್ಟಲೆ ಜೀವನದ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಈ ಹಿನ್ನಲೆ ಪ್ರತಿಯೊಬ್ಬ ಕೃಷಿದಾರರು ತಮ್ಮ ತಮ್ಮ ಕೇಸಿನ ವಿಷಯವನ್ನು ಸಮರ್ಪಕವಾಗಿ ಕೋರ್ಟಿನಲ್ಲಿ ತಿಳಿಸಿ ರಾಗಿ ಸಂಧಾನವನ್ನು ಮಾಡಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಮಯ ದುಡ್ಡು ಮರ್ಯಾದೆ ಇವುಗಳೆಲ್ಲವನ್ನು ಉಳಿಸಲು ಸಾಧ್ಯವಾಗುತ್ತದೆ ಅಲ್ಲದೆ ಇಂದಿನ ನ್ಯಾಯಾಲಯವು ಕೂಡ ವ್ಯಾಜ್ಯ ಮುಕ್ತ ಸಮಾಜ ನಿರ್ಮಿಸಲು ಮುಂದಾಗಿದೆ, ಇಂತಹ ರಾಜಿ ಮೇಳಗಳಿಗೆ ಭಾಗವಹಿಸಿ ತಮ್ಮ ತಮ್ಮ ಕೇಸುಗಳನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ವಕೀಲರಾದ ಎಸ್ ಡಿ ಹನುಮಂತರಾಯ ಕೆಪಿ ಪ್ರಭಾಕರ್ ವಿಶ್ವನಾಥ್ ಕಾಂತರಾಜ್ ನೇತ್ರಾವತಿ ಸೇರಿದಂತೆ ಅನೇಕ ವಕೀಲರು ಭಾಗಿಯಾಗಿದ್ದರು