ಚಳ್ಳಕೆರೆ :
ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಚಳ್ಳಕೆರೆ ನಗರದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ಜಗ್ಗು ಬಾಸ್ ಶಿಷ್ಯವೃಂದ, ಹರಿಹರಸುತ ಸೇವಾ ಸಮಿತಿ
ಸದಸ್ಯರಿಂದ ಇಂದು ಕರಿಬಸವಜ್ಜಯ್ಯ ದೇವಾಲಯದಲ್ಲಿ
ಶನಿವಾರದ ಹಾಗೂ ಬಾಬು ಗುರುಸ್ವಾಮಿಯವರ 18 ನೇ
ವರ್ಷದ ಶಬರಿಮಲೆ ಯಾತ್ರೆಯ ಪ್ರಯುಕ್ತ ವಿಶೇಷವಾಗಿ
ಪೂಜೆ ಮತ್ತು ಅಭಿಷೇಕ ಶಾಸ್ರೋಕ್ತವಾಗಿ
ನೆರವೇರಿಸಲಾಯಿತು..
ಜನವರಿ 2 ನೇ ತಾರೀಖಿನಂದು ಚಳ್ಳಕೆರೆಯ ಗಾಯತ್ರಿ
ಕಲ್ಯಾಣ ಮಂಟಪ ದಲ್ಲಿ ನಡೆಯಲಿರುವ ಪಡಿಪುಜಾ
ಮಹೋತ್ಸವ ನಿರ್ವಿಗ್ನವಾಗಿ ನಡೆಯಲೆಂದು ವೀರಭದ್ರ
ಸ್ವಾಮಿ ಹಾಗೂ KEB ಗಣೇಶ ದೇವಸ್ಥಾನ ದಲ್ಲಿ
ಇಂದು ವಿಶೇಷ ಪೂಜೆ ಮಾಡಿಸುವ ಮೂಲಕ ಪ್ರಾರ್ಥಿಸಲಾಯಿತು…
ಈ ಸಮಯದಲ್ಲಿ ಬಾಬುಗುರುಸ್ವಾಮಿ ಮತ್ತು
ಸೇವಸಮಿತಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.