ಸಂಭ್ರಮದ ತಿಮ್ಮಪ್ಪಯ್ಯನಹಳ್ಳಿ ಶ್ರೀ ಕರಿಬಸವೇಶ್ವರ ಸ್ವಾಮಿಯ 102ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ.
ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಭ್ರಮ ಸಡಗರದಿಂದ ಶ್ರೀ ಕರಿಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ರಥೋತ್ಸವ ಶುಕ್ರವಾರ ನಡೆಯಿತು.
ಬೆಳಗ್ಗೆ 8:00 ಗಂಟೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ರಥವನ್ನು ಶೃಂಗಾರ ಮಾಡಲಾಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ಕರಿಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಿ ರಥಕ್ಕೆ ಚಾಲನೆ ನೀಡಲಾಯಿತು.
ಇನ್ನೂ ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಮುಕ್ತಿ ಭಾವುಟವನ್ನು ಎಚ್.ಬಿ. ಮಲ್ಲಿಕಾರ್ಜುನ್ ಅವರ ಮಕ್ಕಳಾದ ತಿಪ್ಪೇಸ್ವಾಮಿ ಡಿ ಎಂ ವಿನೋದ್, ಡಿ ಎಂ ಅಭಿಷೇಕ್, ರವರು ಮುಕ್ತಿ ಬಾವುಟವನ್ನು ಶ್ರೀ ಕರಿಬಸವೇಶ್ವರ ಸ್ವಾಮಿಯ ಮುಕ್ತಿ ಬಾವುಟವನ್ನು 1,15,000.ರೂ. ಮುಕ್ತಿ ಬಾವುಟವನ್ನು ಆರಾಜಿನಲ್ಲಿ ಪಡೆದುಕೊಂಡರು
ಮಹಾಮಂಗಳಾರತಿ ನಂತರ ರಥೋತ್ಸವಕ್ಕೆ ಅದ್ದೂರಿಯಾಗಿ ಗ್ರಾಮದ ಮುಖಂಡರು ಗ್ರಾಮಸ್ಥರು ಚಾಲನೆಯನ್ನು ನೀಡಿದರು.
ಇದೇ ವೇಳೆ ಗ್ರಾಮದ ಮುಖಂಡ ಜಿ .ತಿಪ್ಪೇಸ್ವಾಮಿ ಮಾತನಾಡಿದರು ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ತಿಕ ಸಂದರ್ಭದಲ್ಲಿ ಸಂಪ್ರದಾಯದಂತೆ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ದೇವಸ್ಥಾನದಿಂದ ಪಾದಗಟ್ಟಿಯವರಿಗೆ ರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ ಈ ಬಾರಿ ಉತ್ತಮ ಮಳೆ ಬೆಳೆ ಆದ ಕಾರಣ ಬಹಳ ಉತ್ಸಾಹ ಸಂತೋಷ ಸಡಗರದಿಂದ ಹಬ್ಬವನ್ನು ಆಚರಿಸುತ್ತೇವೆ ನಮ್ಮ ಪೂರ್ವಜರ ಕಾಲದಿಂದಲೂ ಶ್ರೀ ಕರಿಬಸವೇಶ್ವರ ಸ್ವಾಮಿ ರಥೋತ್ಸವ ಗ್ರಾಮದ ಎಲ್ಲಾ ಸಮುದಾಯದವರ ಜೊತೆಗೂಡಿ ಎಲ್ಲಾ ಹಬ್ಬಗಳಿಗಿಂತ ವಿಶೇಷವಾಗಿ ಕಾರ್ತಿಕ ಮಾಸವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಮುಖಂಡ ಜಿ.ವಿ. ಕರಿಯಣ್ಣ ಮಾತನಾಡಿದರು ಶ್ರೀ ಕರಿಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಈ ವರ್ಷ ಕೆರೆ ಕೋಡಿಗಳು ತುಂಬಿ ಹರಿಯುವುದರಿಂದ ಜನ ತುಂಬಾ ಸಂತೋಷದಿಂದ ಇದ್ದಾರೆ ಆದ್ದರಿಂದ ಈ ಬಾರಿ ಗ್ರಾಮದಲ್ಲಿ ಅದ್ದೂರಿಯಾಗಿ ಶ್ರೀ ಕರಿಬಸವೇಶ್ವರ ಕಾರ್ತಿಕ ಮಾಸದ ರಥೋತ್ಸವ ಮತ್ತು ಜಾತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.
ಇನ್ನೂ ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ದೊಡ್ಡ ಗೌಡರ ವಂಶಸ್ಥರಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಾಲರಾಜ್, ಮುಖಂಡರಾದ ಜಿ ತಿಪ್ಪೇಸ್ವಾಮಿ, ಜಿ.ವಿ ಕರಿಯಣ್ಣ, ಬಿ.ಎಸ್. ಪ್ರಕಾಶ್, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ರವಿಕುಮಾರ್, ಉಪಾಧ್ಯಕ್ಷ ಎಂ ತಿಪ್ಪೇಸ್ವಾಮಿ ರಾಮಸಾಗರ, ಸದಸ್ಯರಾದ ಜಿ ಎಸ್ ವಿಜಯ್ ಕುಮಾರ್, ಡಿ.ರೇವಣ್ಣ, ಅಶೋಕ್, ಶೈಲಜಾ ಮಂಜಣ್ಣ , ಮತ್ತು ದೇವಸ್ಥಾನ ಸಮಿತಿಯ ಎಚ್ ಬಿ ರವೀಂದ್ರ ಸೇರಿದಂತೆ ಸಮಸ್ತ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಗ್ರಾಮಸ್ಥರು ವಿವಿಧ ಹಳ್ಳಿಗಳ ಭಕ್ತಾದಿಗಳು ಉಪಸ್ಥಿತರಿದ್ದರು.