ಚಳ್ಳಕೆರೆ :
ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತು
ಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ
ಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 7
ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಈ ಕುರಿತು ಮೃತ
ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು, ಸಿಎಂ ಅವರನ್ನು
ಭೇಟಿ ಮಾಡುವ ಕುರಿತು ಆಪ್ತರೊಂದಿಗೆ ಚರ್ಚಿಸುತ್ತೇವೆ ಸರ್ಕಾರ
ಮಧ್ಯಂತರ ಬೇಲ್ ಪ್ರಶ್ನಿಸಿ ಸುಪ್ರೀಂ ಕೋರ್ಟೆ ಮೊರೆ ಹೋಗಿದೆ.
ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಮೊರೆ ಹೋಗುವ ವಿಶ್ವಾಸವಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಮೇಲೆ
ಯಾವುದೇ ಒತ್ತಡ ಹಾಕಲ್ಲ ಯೋಚಿಸುತ್ತೇವೆ ಎಂದು ಅವರು
ಮಾಧ್ಯಮದವರ ಜತೆ ಮಾತನಾಡಿದ್ದಾರೆ.