ಚಳ್ಳಕೆರೆ : ಸಾರ್ವಜನಿಕರ ಅವಾಹಲುಗಳಿಗೆ ನ್ಯಾಯಾಂಗ ಇಲಾಖೆ ಭದ್ರಗೊಳ್ಳಲು ಸಕ್ರಿಯ ವಕೀಲರು ಮುಂದಾಗಬೇಕು. ಕಾನೂನು ಪ್ರೋತ್ಸಾಹಿಸುವ ಜವಾಬ್ದಾರಿ ವಕೀಲರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯದೀಶರಾದ ಸಮೀರ್ ಪಿ.ನಂದ್ಯಾಲ ಹೇಳಿದರು.
ಅವರು ನಗರದ ಸೊಮಗುದ್ದು ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಸಮಾಜದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಮುಖ್ಯ ಪಾತ್ರವಹಿಸಬೇಕು. ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ಇನ್ನೂ ಜಿಲ್ಲಾ ಉಪವಿಭಾಗ ಅಧಿಕಾರಿ ಎಂ.ಕಾರ್ತಿಕ್ ಮಾತನಾಡಿ,
ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಾಗ ವಕೀಲರಿಗೆ ಆಗುವ ಸಂತೋಷ, ಸಾರ್ಥಕ ಭಾವಕ್ಕೆ ಬೆಲೆ ತೆತ್ತಲು ಹಾಗದು, ‘ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಯಾವ ಪ್ರಶ್ನೆ ಕೇಳಬೇಕು? ಯಾವುದನ್ನು ಕೇಳಬಾರದು ಎನ್ನವ ಸ್ಪಷ್ಟತೆ ವಕೀಲರಿಗೆ ಇರಬೇಕು. ವರ್ಷವಿಡೀ ನಡೆಯುವ ನ್ಯಾಯಾಲಯ ಕೆಲಸದ ನಡುವೆ ಸಣ್ಣ ಖುಷಿ ನಿಡುವ ವಕೀಲರ ದಿನಾಚರಣೆ ಮಹತ್ವದ್ದಾಗಿದೆ’ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ನ್ಯಾಯಾಲಯ ಕಲಾಪ ಸುಸೂತ್ರವಾಗಿ ನಡೆಯಬೇಕಿದ್ದರೆ ಇಡೀ ನ್ಯಾಯಾಲಯ ಒಂದು ತಂಡವಾಗಿ ಕೆಲಸ ಮಾಡಬೇಕಿದೆ’, ಕಕ್ಷಿದಾರರಿಗೆ ನ್ಯಾಯದೊರಕಿಸುವ ನಿಟ್ಟಿನಲ್ಲಿ ಕಾರ‍್ಯನಿರ್ವಹಿಸಬೇಕು. ಬಡ ಕಕ್ಷಿದಾರನ ಶೋಷಣೆಯಾಗಬಾರದು,
ನ್ಯಾಯಾಂಗ ಇಲಾಖೆ ಯುವ ವಕೀಲರ ಮೇಲೆ ಹೊಸ ಭರವಸೆಗಳನ್ನು ಇಟ್ಟುಕೊಂಡಿದೆ. ಪೂರ್ವಾಗ್ರಹಪೀಡಿತರಾಗಿ ಚಿಂತಿಸುವುದು ಬೇಡ. ನ್ಯಾಯಾಧೀಶರಾದರೆ ನಮಗೆ ಸ್ವತಂತ್ರ ಕಡಿಮೆಯಾಗುತ್ತದೆ. ಮಕ್ಕಳ ಶಿಕ್ಷ ಣಕ್ಕೆ ತೊಂದರೆಯಾಗುತ್ತದೆ ಎಂಬ ಮನೋಭಾವನೆಗಳನ್ನು ದೂರಮಾಡಿ ಎಂದರು.
ಇದೇ ಸಂಧರ್ಭದಲ್ಲಿ ವಕೀಲರಾದ ಆನಂದ ಮಾತನಾಡಿಸರು,
ಪ್ರಧಾನ ಸಿವಿಲ್ ಮತ್ತು ಜೆಎಂಎಪ್ ಸಿ ನ್ಯಾಯದೀಶರಾದ ಹೆಚ್.ಆರ್.ಹೇಮಾ, ತಹಶೀಲ್ದಾರ್ ರೇಹಾನ್ ಪಾಷ, ಬಿ.ಪಾಲಯ್ಯ, ಎಂ.ಸಿದ್ದರಾಜು, ಎ.ರಾಮಕೃಷ್ಣ, ಟಿ.ರುದ್ರಯ್ಯ, ಕಾರ್ಯಕಾರಿಸಮಿತಿ ಸದಸ್ಯರು,
ಮಾಜಿ ಅಧ್ಯಕ್ಷ ಅಶ್ವಥ್ ನಾಯಕ,
ಕುಮಾರ್ ಜೆ, ಹಾಗೂ ಹಲವು ವಕೀಲರು, ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸುಮಾರು 12 ಜನ ವಕೀಲರನ್ನು ಆತ್ಮೀಯವಾಗಿ ಸನ್ಮಾನಿಸಿದರು.