ಚಳ್ಳಕೆರೆ: ಬಯಲು ಸೀಮೆಯಲ್ಲಿ ಮಳೆ ಬಾರದೆ ಇದ್ದರೆ ಒಂದು ಸಮಸ್ಯೆ ಮಳೆ ಬಂದರೆ ಇನ್ನೊಂದು ಸಮಸ್ಯೆ ಎದುರಿಸುವಂತಾಗಿದೆ,
ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆ ಮೇಲೆ ನಿಂತು ಸಂಚಾರಕ್ಕೆ ಕಿರಿಕಿಯಾಗುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ವ್ಯಾಪ್ತಿಯ ದೊಣೆಹಳ್ಳಿ ಗ್ರಾಮದ ತಿಮ್ಮಣ್ಣನ ಮನೆಯಿಂದ ಅಕ್ಕಮ್ಮನ ಮನೆಯವರೆಗೆ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ಹಾಗೂ ಮಳೆ ನೀರು ರಸ್ತೆಯಲ್ಲಿ ನಿಂತು ಮನೆಒಳಗೂ ನುಗ್ಗುವ ಬೀತಿ ಎದುರಾಗಿದೆ.
ಕಳೆದ ಐದು ವರ್ಷಗಳಿಂದ ಓಬಳಾಪುರ ಗ್ರಾಮಪಂಚಾಯಿತಿ ಕಚೇರಿಗೆ ಮನವಿ ಸಲ್ಲಿದಾಗ ಅಥವಾ ಮಳೆ ಬಂದು ನೀರು ನಿಂತಾಗ ಗ್ರಾಪಂ ಸದಸ್ಯರು ಹಾಗೂ ಪಿಡಿಒ ಬಂದು ನೋಡಿ ಚರಂಡಿ ಮಾಡಿಸುತ್ತೇವೆ ಎಂದು ಹೇಳಿ ಭರವಸೆ ನೀಡಿ ಹೋಗುತ್ತಾರೆ ಮತ್ತೆ ಇತ್ತ ಯಾರೂ ಸುಳಿಯುವುದಿಲ್ಲ.
ಚರಂಡಿ ನಿರ್ಮಿಸಲು ಜಾಗವಿದ್ದರೂ ಕೆಲವರು ಚರಂಡಿ ನಿರ್ಮಿಸಲು ಬಿಡದೆ ಇರುವುದರಿಂದ ಈಗ ಚರಂಡಿ ನೀರು ಹಾಗೂ ಮಳೆ ನೀರು ನಮ್ಮ ಮನೆ ಮುಂದೆ ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಮಿಕ ರೋಗ ಬೀತಿ ಎದುರಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆಗೆ ರಸ್ತೆ ತುಂಬಾ ನೀರು ನಿಂತಿದ್ದು ಜನರು ನಿಂತು ನೋಡುತ್ತಾರೆ ಈ ನೀರು ನೋಡಲು ಗ್ರಾಪಂ ಸದಸ್ಯರೂ ಸಹ ಬಂದು ಪರಿಶೀಲನೆ ನಡೆಸಿದರೂ ಸಹ ನೀರು ರಸ್ತೆ ಮೇಲೆ ಹರಿಯದಂತೆ ಚರಂಡಿ ನಿರ್ಮಿಸಲು ಮುಂದಾಗುತ್ತಿಲ್ಲ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಜಾಗ ಒತ್ತುವರಿ ತೆರವುಗೊಳಿಸಿ ಚರಂಡಿ ನಿರ್ಮಿಸುವರೇ ಕಾದು ನೋಡಬೇಕಿದೆ.