ಚಳ್ಳಕೆರೆ
ಚಳ್ಳಕೆರೆ ; ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಪರಿವರ್ತಕ ಕೈಕಟ್ಟ ಹಿನ್ನಲೆಯಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾದ ಹಿನ್ನಲೆಯಲ್ಲಿ ನನ್ನಿವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಭಾಷ ಕೂಡಲೇ ಟ್ಯಾಂಕರ್ ನೀರು ಹೊದಗಿಸುವ ಮೂಲಕ ನೀರಿನ ಭವಣಿ ತಪ್ಪಿಸಿದ್ದಾರೆ
ಬೊಮ್ಮದೇವರಹಟ್ಟಿ ಬಳಿರುವ ಸೊಮಲುಕೆರೆಯಲ್ಲಿದ್ದ ಕುಡಿಯುವ ನೀರಿನ ಕೊಳವೆಬಾವಿ ಮುಳುಗಡೆಯಾಗಿರುವುದರಿಂದ ಗಡ್ಡದಾರಹಟ್ಟಿ ಹಳ್ಳದಲ್ಲಿರುವ ಕೊಳವೆಬಾವಿಯಿಂದ ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡಲಾಗಿತ್ತು, ಆದರೆ ಕೊಳವೆ ಬಾವಿಗೆ ವಿದ್ಯುತ್ ಪೂರೈಸುವ ವಿದ್ಯುತ್ ಪರಿವರ್ತಕ ಕೈಕಟ್ಟ ಹಿನ್ನಲೆಯಲ್ಲಿ ಸರಿಪಡಿಸುವ ವರೆಗೆ ಸಾರ್ವಜನಿಕರಿಗೆ ಸಮಸ್ಯೆ ಯಾಗದಂತೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಹೊದಗಿಸಿದ್ದೆವೆ , ತಕ್ಷಣೇ ಬೆಸ್ಕಾಂ ಜೊತೆಗೆ ಸಂಪರ್ಕ ಸಾಧಿಸಿ ಅತೀ ತುರ್ತಾಗಿ ವಿದ್ಯುತ್ ಸರಿಪಡಿಸುವಂತೆ ಮನವಿ ಮಾಡಲಾಗಿದೆ ಇಂದು ಸರಿಹೋಗಬಹುದು
ಎನ್ನುತ್ತಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಬಾಷರವರು.