ಚಳ್ಳಕೆರೆ : ಸಾರ್ವಜನಿಕ ಹಿತ ರಕ್ಷಣೆಗೆ ಹಾಗೂ ಸದಾ ಬದ್ಧರಾಗಿರುವ ಆಟೋ ಚಾಲಕರ ಸೇವೆ ಅನನ್ಯ, ಹಗಲು ರಾತ್ರಿ ಏನದೆ ನಿರಂತರವಾಗಿ ಪ್ರಯಾಣಿಕರ ಸೇವೆಗೆ ಬದ್ಧರಾಗಿರುವಂತಹ ಆಟೋ ಚಾಲಕರ ಸೇವೆ ಶಾಘ್ಲನೀಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹಬಿಬುಲ್ಲಾ ರವರು ಹೇಳಿದರು.
ನಗರದ ಸೋಮಗುದ್ದು ರಸ್ತೆಯಲ್ಲಿ ನಾಗರಕಟ್ಟೆ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಯಾಣಿಕರ ಸೇವೆಗೆ ಆಟೋ ಚಾಲಕರ ಸೇವೆ ಬಹುಮುಖ್ಯವಾಗಿದೆ, ಸುರಕ್ಷಿತವಾಗಿ ಪ್ರಯಾಣಿಕರನ್ನು ಮನೆಗೆ ಬಿಡುವ ಕಾರ್ಯ ಶಾಘ್ಲನಿಯವಾದದ್ದು, ಈ ಒಂದು ಕಾರ್ಯ, ಉತ್ತಮ ಸಮಾಜ ಸೇವೆ ಎನ್ನಬಹುದು ಎಂದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಮ್ ಆದ್ಮಿ ಪಕ್ಷದ ಬಿ ಪಾಪಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ಘಟಕ ಅಧಿಕಾರಿ ಬಿ ಶಾಂತಕುಮಾರಿ, ಉಪನ್ಯಾಸಕರು, ಸಾರ್ವಜನಿಕರು ಹಾಗೂ ಆಟೋ ಚಾಲಕರು ಹಾಜರಿದ್ದರು.