ಚಳ್ಳಕೆರೆ :
ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ತಡರಾತ್ರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹೌದು
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಗ್ರಾಮದಿಂದ ಬೆಲಗೂರು ಗ್ರಾಮದ ಕಡೆಗೆ ಹೋಗುವ ಎರಡು ಗುಡ್ಡದ ಸಂದಿ ಕಾವಲು ರಸ್ತೆಯಲ್ಲಿ ಬರುವ ಭದ್ರ ಮೇಲ್ದಡೆ ಮೇಲು ಸೇತುವೆ ಹತ್ತಿರ ಖಚಿತ ಮಾಹಿತಿ ಮೆರೆಗೆ ರಸ್ತೆಗಾವಲು ನಿರ್ವಹಿಸುತ್ತಿರುವ ಸಮಯದಲ್ಲಿ ಲೋಕೇಶ್ ಬಿನ್ ರಾಜಪ್ಪ ಎಂಬುವವನು ದ್ವಿಚಕ್ರ ವಾಹನದಲ್ಲಿ ಸು. 972 ಗ್ರಾಂ ಒಣ ಗಾಂಜಾವನ್ನೂ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಒಣ ಗಾಂಜಾ ಮತ್ತು ದ್ವಿಚಕ್ರ ವಾಹನವನ್ನು ಇಲಾಖಾ ವಶಕ್ಕೆ ಪಡೆದು ಆರೋಪಿಯಾದ ಲೋಕೇಶ್ ಯಾದಘಟ್ಟ ಗ್ರಾಮ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಎಂಬಾತನ ವಿರುದ್ಧ ಎನ್. ಡಿ. ಪಿ. ಎಸ್ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಸದರಿ ಎ-2 ಆರೋಪಿಯಾದ ಸದರಿ ದ್ವಿಚಕ್ರ ವಾಹನದ ಮಾಲೀಕನನ್ನು ತನಿಖಾ ಸಮಯದಲ್ಲಿ ಪತ್ತೆ ಹಚ್ಚಿ ಬಂಧಿಸಲಾಗುತ್ತದೆ ಎಂದು
ಅಬಕಾರಿ ನಿರೀಕ್ಷಕರಾದ ವನಿತಾ ಹೇಳಿದ್ದಾರೆ
ಇದೇ ಸಂಧರ್ಭದಲ್ಲಿ
ಅಬಕಾರಿ ನಿರೀಕ್ಷಕರಾದ ವನಿತಾ, , ಜಿಲ್ಲಾ ವಿಚಕ್ಷಣ ದಳ ಕೆ ರಮೇಶ್ ನಾಯ್ಕ್, ಅಬಕಾರಿ ಮುಖ್ಯ ಪೇದೆ, ಜೆ ಬಸವರಾಜ, ಅಬಕಾರಿ ಪೇದೆ ಹಾಗೂ ನಾಗರಾಜ್ ತೊಳಮಟ್ಟಿ, ವಾಹನ ಚಾಲಕರವರು ಹಾಗೂ ಹೊಸದುರ್ಗ ವಲಯದ ಅಬಕಾರಿ ಮುಖ್ಯ ಪೇದೆ ರಂಗಸ್ವಾಮಿ ಹಾಜರಿದ್ದರು.