ಚಳ್ಳಕೆರೆ : ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನಿರ್ದೇಶಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಯೋಗೀಶ ಟಿ. ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳೊಂದಿಗೆ ಸತತ 30 ನಿಮಿಷಗಳ ಕಾಲ ಸಂವಾದ ನಡೆಸಿ ವಿದ್ಯಾರ್ಥಿಗಳ ಕುಂದುಕೊರತೆ ಹಾಲಿಸಿ ನಂತರ ವಸತಿ ನಿಲಯದ ಸ್ಟೋರ್ ರೂಂ, ಶೌಚಾಲಯ, ಅಡುಗೆ ಮನೆ ಪರಿಶೀಲಶೀಲನೆ ನಡೆಸಿ. ಅಡುಬಟ್ಟರಿಗೆ ಎಷ್ಟು ಮಕ್ಕಳಿದ್ದಾರೆ. ಸಾಂಬಾರ್ ಮಾಡಲು ಬೇಳೆ ತರಕಾರಿ ಎಷ್ಟು ಬಳಕೆ ಮಾಡುತ್ತೀರಿ.ಸಾಂಬಾರಿಗೆ ಮಸಾಲೆ ಹೆಚ್ಚಿಗೆ ಬಳಕೆ ಮಾಡದೆ ಬೇಳೆ ತರಕಾರಿ ಬಳಕೆ ಮಾಡಿ ರುಚಿ ಶುಚಿಯಾದ ಸಾಂಬಾರ್ ಮಾಡಬೇಕು.
ಸರಕಾರದಿಂದ ಮಕ್ಕಳ ಲೆಕ್ಕದ ಮೇಲೆ ಅನುದಾನ ನೀಡುತ್ತಿದ್ದು ಮಕ್ಕಳ ಸಂಖ್ಯೆಗೆ ಅನುಗುಳವಾಗಿ ಗುಣ ಮಟ್ಟದ ತರಕಾರಿಯನ್ನು ಲೆಕ್ಕದಂದೆ ಅಡುಗೆಗೆ ಬಳಕೆ ಮಾಡಿ ತಯಾರಿಸಿದಾಗ ಮಾತ್ರ ಸಾಂಬಾರ್ ಮಕ್ಕಳ ಬಾಯಿಗೆ ರುಚಿ ದೊರೆಯುತ್ತಿದೆ.
ವಸತಿ ಶಾಲಡಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾರು ನಮ್ಮ ನಿಮ್ಮ ಹಾಗೂ ಅಧಿಕಾರಿಗಳ ಮಕ್ಕಳಲ್ಲ ಬಡ ಕುಟುಂಬದಿAದ ಬಂದವರಾಗಿರುತ್ತಾರೆ ನಿಮ್ಮ ಮಕ್ಕಳಂತೆ ತಿಳಿದು ಸರಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಉತ್ತಮ ಸೌಲಭ್ಯ ನೀಡಿ.
ಶೌಚಾಲಯ .ಕೊಠಡಿಗಳು ವಸತಿ ನಿಲಯದ ಸುತ್ತ ಮುತ್ತ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್. ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ಶಿವರಾಜ್ . ಮೂರಾರ್ಜಿ ವಸತಿ ಶಾಲಾಲೆಯ ಪ್ರಾಚಾರ್ಯ. ಹಾಗೂ ಸಹಶಿಕ್ಷಕರು.ನಿಲಯ ಪಾಲಕ ಇತರರಿದ್ದರು.