ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಸದಾ ಇರಲಿ ಶಾಸಕ ಎನ್, ವೈ, ಗೋಪಾಲಕೃಷ್ಣ,
ನಾಯಕನಹಟ್ಟಿ:: ಅ.17.
ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಇರಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.
ಗುರುವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ಹೋಬಳಿಯ ನಾಯಕ ಸಮುದಾಯದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡು ಮಹಾಋಷಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಾಯಕ ಸಮುದಾಯ ಮಹರ್ಷಿ ವಾಲ್ಮೀಕಿ ಜಯಂತಿ ಇಡೀ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಾದ್ಯಂತ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕೇಂದ್ರ ಬಿಂದು ನಾಯಕನಹಟ್ಟಿ ಹೋಬಳಿ ಹೋಬಳಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ನಾಯಕ ಸಮುದಾಯದವರು ಇರುವುದರಿಂದ ಇವತ್ತು ಬೆಳಗ್ಗೆಯಿಂದ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಿಂದ ವಾಲ್ಮೀಕಿ ವೃತ್ತ ತೇರುಬೀದಿಯವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಭವ್ಯ ಮೆರವಣಿಗೆಯನ್ನು ನಡೆಸಲಾಗಿದೆ. ವಿವಿಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ ವೀರಗಾಸೆ ತಮಟೆ ಉರುಮೆ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಹೋಬಳಿಯ ಮುಖಂಡರು ಜನಪ್ರತಿನಿಧಿಗಳು ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಸದಾ ಇರಲಿ ಎಂದು ಶುಭ ಹಾರೈಸಿದರು.
ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರೈತರ ಎತ್ತುಗಳ ಪ್ರದರ್ಶನಕ್ಕೆ ಚಾಲನೆಯನ್ನು ನೀಡಿ. ಮಾತನಾಡಿದರು ಮಹರ್ಷಿ ವಾಲ್ಮೀಕಿ ಬರೆದಂತಹ ರಾಮಾಯಣ ಸರ್ವಕಾಲಕ್ಕೂ ಕೂಡ ನಮಗೆಲ್ಲರಿಗೂ ಬೇಕಾಗಿದೆ ಮಹರ್ಷಿ ವಾಲ್ಮೀಕಿಯನ್ನು ನಾವೆಲ್ಲರೂ ಸ್ಮರಿಸುವ ದಿನವಾಗಿದೆ ಎಂದರು
ರೈತರ ಎತ್ತುಗಳ ಪ್ರದರ್ಶನದಲ್ಲಿ ಪ್ರಥಮ ಬ ನಲಗೇತನಹಟ್ಟಿ ಈಗಲೂ ಬೋರಯ್ಯ 5,000 ಬಹುಮಾನ ಪಾರಿತೋಷಕ ನೀಡಲಾಯಿತು. ದ್ವಿತೀಯ ಜಾಗನೂರಹಟ್ಟಿ ಸಿದ್ದಪ್ಪ 3000 ಬಹುಮಾನ ಪಾರಿತೋಷಕ ನೀಡಲಾಯಿತು. ತೃತೀಯ ನಲಗೇತನಹಟ್ಟಿ ತಿಪ್ಪೇಸ್ವಾಮಿ 2000 ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ, ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ನಿರ್ದೇಶಕರಾದ ಎಸ್ ಓಬಯ್ಯ, ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಹನುಮಣ್ಣ, ಎನ್ ರುದ್ರಣ್ಣ, ಬಂಡೆಕಪಿಲೆ ಓಬಣ್ಣ, ಮಲ್ಲೂರಹಳ್ಳಿ ಸಿ. ಭೈಯಣ್ಣ, ಗುಂತಕೋಲಮ್ಮನಹಳ್ಳಿ ಎಂ. ಪಾಪಣ್ಣ, ಪಿ.ಓ, ತಿಪ್ಪೇಸ್ವಾಮಿ, ಪಿ ನಾಗರಾಜ್ ಎಂ. ಚಿನ್ನಯ್ಯ, ಕಾಕಸೂರಯ್ಯ, ಕಾರ್ಯದರ್ಶಿ ನಲಗೇತನಹಟ್ಟಿ ಜಿ,ವೈ ತಿಪ್ಪೇಸ್ವಾಮಿ, ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ, ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಹೋಬಳಿಯ ಎಲ್ಲಾ ಸಮಸ್ತ ನಾಯಕ ಸಮುದಾಯದ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಜನಪ್ರತಿನಿಧಿಗಳು ಯುವ ಮುಖಂಡರು ವಿದ್ಯಾರ್ಥಿಗಳು ಮತ್ತು ಸುಚೇತನ ಮಹಿಳಾ ಸಂಘದ ಸರ್ವ ಸದಸ್ಯರು, ಹೋಬಳಿಯ ಸಮಸ್ತ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು.