ಚಳ್ಳಕೆರೆ :
ಕೆಆರ್ ಎಸ್ ಪಕ್ಷದಿಂದ ತಾಲೂಕು ಪಂಚಾಯತಿ ಇಓ ಗೆ ಮನವಿ
ನಗರಂಗೆರೆ ಮೀನುಗಾರರ ಸಹಕಾರಿ ಸಂಘ
ಸ್ಥಾಪಿಸಿದ್ದು ಅಧ್ಯಕ್ಷರಾಗಿ ಸಿ.ಓಬಯ್ಯ
ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂಘ
ಮಾನ್ಯತೆ ಪಡೆಯದ ಹಿನ್ನೆಲೆಯಲ್ಲಿ ಸಂಘದ
ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಕ್ರಮ
ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ
ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಟಿ.
ನಾಗರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್.
ಬಾಲರಾಜು, ತಾಲೂಕು ಪ್ರಧಾನ
ಕಾರ್ಯದರ್ಶಿ ಮೋಹನ್‌ರೆಡ್ಡಿ ತಾಲೂಕು
ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ
ಹಾಗೂ ಮೀನುಗಾರಿಕೆ ಇಲಾಖೆ ಸಹಾಯಕ
ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಿದೆ.
ಈ ಬಗ್ಗೆ ಜಿಲ್ಲಾಧ್ಯಕ್ಷ ಮಾಹಿತಿ ನೀಡಿ,
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು
ಹಿಂದಿನ ಅಧ್ಯಕ್ಷೆ ನಾಗವೇಣಿ ಸಹಿ ಇರುವ
ನಕಲು ಗ್ರಾಮ ಪಂಚಾಯಿತಿ ಪತ್ರದಲ್ಲಿ
ಸಾರ್ವಜನಿಕ ಸಭೆ ನಡೆಸಿ ಒಪ್ಪಿಗೆ ಪಡೆದ
ಬಗ್ಗೆ ಸುಳ್ಳು ದಾಖಲೆ ನೀಡಿದ್ದು,
ಈ ಬಗ್ಗೆ
ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ
ವಿರುದ್ಧ
ಕ್ರಮಕೈಗೊಳ್ಳುವಂತೆ
ಒತ್ತಾಯಿಸಿದ್ದಾರೆ.