ಕೆರೆಕೊಂಡಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ.
ಮೊಳಕಾಲ್ಮೂರು :- ರಾಜ್ಯದ ಹಲವಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾರೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
ಅನೇಕ ಬಾರಿ ಬಿದಿ ನಾಯಿ ಅವಳಿಗೆ ಕಡಿವಾಣ ಎಂದು? ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಅಧಿಕಾರಿಗಳು.
ಹೌದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ, 11 ವರ್ಷ ಬಾಲಕ ಮಿಥುನ್ ಮೃತಪಟ್ಟ ಮಗು, ಕೋಚಿಂಗ್ ಸೆಂಟರ್ ನಿಂದ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿರುವಾಗ ಮೂರು ನಾಯಿಗಳು ಸುತ್ತುವರೆದು ಬಾಲಕನನ್ನು ಕಚ್ಚಿರುವ ಘಟನೆ ನಡೆದಿದೆ ನಾಯಿಗಳು ಕಚ್ಚಿರುವ ರಭಸಕ್ಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಸ್ಪತ್ರೆಗೆ ಕರದೈವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ, ಬಾಳಿ ಬದುಕಬೇಕಾಗಿದ್ದ ಮಗು ನಾಯಿ ದಾಳಿಗೆ ಬಲಿಯಾಗಿರುವುದು ವಿಪರ್ಯಾಸವೇ ಸರಿ.
ಈ ಹಿಂದೆ ಕೋತಿಗಳು ದಾಳಿ ಮಾಡಿ ತಲೆಗೆ ಗಾಯ ಮಾಡಿದ್ದವು ಈ ಘಟನೆ ವಾಸುವ ಮುನ್ನವೇ ಘೋರ ದುರಂತ ನಡೆದು ಹೋಗಿದೆ, ಎಂದು ಸ್ಥಳಿಯ ಮುಖಂಡರಾದ ತಿಪ್ಪೆ ಸಿ ತಿಳಿಸಿದರು. ಒಟ್ಟಿನಲ್ಲಿ ಮಗು ಕಳೆದುಕೊಂಡ ತಂದು ತಾಯಿಯ ಹಾಕ್ರಂದನಾ ಮುಗಿಲಿ ಮುಟ್ಟಿದೆ.
ಇನ್ನಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.