ಚಳ್ಳಕೆರೆ : ಅ 17ರಂದು ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ವಾಲ್ಮೀಕಿ ವೃತ್ತದಲ್ಲಿ ನಾಯಕ ಸಮುದಾಯದಿಂದ ಬೈಕ್ ಜಾಥ ನಡೆಸಿದರು.
ಮುಂಜಾನೆ ಮನೆಯಲ್ಲಿಯೇ ಬೈಕ್ ರ್ಯಾಲಿಗೆ ಚಾಲನೆ ನೀಡಿದ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿಯರ ಆದರ್ಶಗಳನ್ನು ಪ್ರಸ್ತುತ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಅವರ ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವು ನೀವೆಲ್ಲರೂ ನಡೆಯುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಜಿಟಿ ವೀರಭದ್ರ ಸ್ವಾಮಿ, ಕಂದಿಕೆರೆ ಸುರೇಶ್ ಬಾಬು , ತಾಲೂಕು ಪಂಚಾಯಿತಿ ನಾಮನಿರ್ದೇಶನ ಸದಸ್ಯ ಸುರೇಶ್, ಆರ್ ಪ್ರಸನ್ನ ಕುಮಾರ್ ,ಚೇತನ್ ಕುಮಾರ್ ಕುಮ್ಮಿ, ನವೀನ್ ಕುಮಾರ್, ಪಿಡಿಓ ಓಬಣ್ಣ, ಶ್ರೀನಿವಾಸ್, ಪಾಪಣ್ಞ, ಕೊರ್ಲಯ್ಯ, ರಜನಿಕಾಂತ್, ಜಯಲಕ್ಷ್ಮಿ, ಇತರ ಯುವಕರು ಸಾರ್ವಜನಿಕರು ಪಾಲ್ಗೊಂಡಿದ್ದರು.