ಚಳ್ಳಕೆರೆ : ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಇಂದು ನಗರಸಭೆ ಅಧ್ಯಕ್ಷರಾದ ಜೈತುಂಬಿ ಮಾಲಿಕ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ‌ ಸಭಾ ನಡವಳಿಗಳನ್ನು ಓದಿ ಸ್ವೀಕರಿಸಿ ವಿಚಾರವನ್ನು ಚರ್ಚಿಸಿದರು, ನಂತರ 2023 ರಿಂದ ಸೆಪ್ಟೆಂಬರ್ 24ರ ವರೆಗೆ ಜಮಾ ಖರ್ಚುಗಳನ್ನು ಓದಿ ಅನುಮೋದಿಸಿದರು, ನಂತರ ನಗರದಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವಂತಹ ಕಟ್ಟಡ ಮಳಿಗೆಗಳನ್ನು ಹೊಸ ಸುತ್ತೋಲೆ ನಿಯಮವಳಿಗಳ ಪ್ರಕಾರ ಅಂಗೀಕರಿಸಬೇಕೆಂಬ ವಿಚಾರ ಸಭೆಯ ಗಮನಕ್ಕೆ ತಂದಾಗ ಸದಸ್ಯರೆಲ್ಲರೂ ಎದ್ದು ನಿಂತು ಹೀಗಿರುವ ಎಲ್ಲಾ ಮಳಿಗೆಗಳ ಹರಾಜನ್ನು ಹೊಸದಾಗಿ ಮಾಡಬೇಕು ಎಂದರು.

ಈ ಹಿಂದೆ ಜಿಲ್ಲಾಧಿಕಾರಿಗಳ
ಆಡಳಿತ ಅಧಿಕಾರವಧಿಯಲ್ಲಿ ಜಿಲ್ಲೆಯ ಎಲ್ಲಾ ನಗರಸಭೆಯಲ್ಲಿ ಸಾಮಾನ್ಯ ಸಭೆಗಳು ನಡೆದಿವೆ ಆದರೆ ಚಳ್ಳಕೆರೆಯಲ್ಲಿ ಮಾತ್ರ ಸಭೆ ಮಾಡಿಲ್ಲ.

ಆ ಸಮಯದಲ್ಲಿ ನಡೆದಿರುವಂತಹ ಕಾಮಗಾರಿಗಳು ಹಾಗೂ ಇತ್ಯಾದಿ ಅನುಮೋದನೆಗಳನ್ನು ಸಭೆಯ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳನ್ನು ಎಲ್ಲಾ ಸದಸ್ಯರು ಪಟ್ಟು ಹಿಡಿದರು, ಸುಮಾರು ಅರ್ಧ ಗಂಟೆ ತರುವಾಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸದಸ್ಯರೆಲ್ಲರನ್ನು ಮನವೊಲಿಸಿ ಮುಂದಿನ ದಿನಗಳಲ್ಲಿ ಹಿಂದೆ ಇದ್ದ ಆಡಳಿತ ಅಧಿಕಾರ ಅವಧಿಯಲ್ಲಿ ಆದಂತ ಎಲ್ಲಾ ದಾಖಲಾತಿಗಳನ್ನು ಕೊಡುವುದಾಗಿ ತಿಳಿಸಿದರು.

ನಂತರ ನಗರದಲ್ಲಿ ಪಾದಾಚಾರಿಗಳಿಗೆ ಹಾಕಿರುವಂತಹ ಸ್ಲಾಬ್ಗಳು ಡೆಕ್ಕುಗಳು ದುರಸ್ತಿಯಾಗಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸದಸ್ಯ ಎಂ.ಜಯಣ್ಣ ಸಭೆಯ ಗಮನಕ್ಕೆ ತಂದಾಗ ಇಂಜಿನಿಯರ್ ವಿನಯ್ ಈಗಾಗಲೇ ಟೆಂಡರ್ ಕರೆದು ಕಾಮಾಗಾರಿ ಮಾಡಲಾಗುತ್ತದೆ ಎಂದು ಉತ್ತರಿಸಿದರು.

ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳ ಆಗಮನಕ್ಕಾಗಿ ಚಿತ್ರದುರ್ಗ ರಸ್ತೆ , ಬೆಂಗಳೂರು ರಸ್ತೆ ನಗರದ ಪ್ರಮುಖ ರಸ್ತೆಗಳ ಮಾತ್ರ ಶುಚಿತ್ವ ಕಾಣುತ್ತಿದೆ, ಆದ್ದರಿಂದ ಪ್ರತಿ ತಿಂಗಳಿಗೂ ಮುಖ್ಯಮಂತ್ರಿಗಳ ಆಗಮನ ಮಾಡಿಸುವಂತಹ ಸಂದರ್ಭದ ಮಾಡಬೇಕಾಗುತ್ತದೆ ಎಂದು ನಗರಸಭೆ ಸದಸ್ಯ ಶ್ರೀನಿವಾಸ್ ಸಭೆಯಲ್ಲಿ ವ್ಯಂಗ್ಯವಾಡಿದರು.

ಕಳೆದ ಒಂದು ವರ್ಷದಿಂದ ಅಧ್ಯಕ್ಷರಿಲ್ಲದೆ ಯಾವುದೇ ಕೆಲಸಗಳು ಇದುವರೆಗೂ ಆಗಿಲ್ಲ ವಾರ್ಡ್ ಗಳಲ್ಲಿ ಸಾರ್ವಜನಿಕರಿಗೆ ಒಂದು ಲೈಟು ಹಾಕಿಸಲು ಹಾಗದ ಪರಸ್ಥಿತಿ‌ ನಿಮಾರ್ಣವಾಗಿದೆ.

ಇನ್ನೂ ಬಾಡಿಗೆ ಮಳಿಗೆಗಳು ದುರಸ್ತಿಯಾಗಿದ್ದು 2014ರಲ್ಲಿ ದುರಸ್ತಿಯಾಗಿವೆ, ಶಿಥಿಲಗೊಂಡಂತ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ಆದೇಶವಾಗಿದ್ದರೂ ಇದುವರೆಗೂ ಬಾಡಿಗೆ ಪಡೆದ ಮಾಲೀಕರು ಕೋರ್ಟ್ ಮೊರೆ ಹೋಗಿರುವ ಕಾರಣ ಹಾಗೆ ಮುಂದುವರಿದ್ದೇವೆ, ಆದ್ದರಿಂದ ಈಗಲಾದರೂ ಹೊಸ ಸುತ್ತೋಲೆ ಪ್ರಕಾರವಾಗಿ ಶಿಥಿಲಗೊಂಡಂತಹ ಮಳಿಗೆಗಳನ್ನು ನೆಲಸಮಗೊಳಿಸಿ ಉಳಿದಂತಹ ಮಳಿಗೆಗಳನ್ನು ಹೊಸ ಹರಾಜು ಮೂಲಕ ಟೆಂಡರ್ ಮಾಡಿ ನಗರಸಭೆ ಬೊಕ್ಕಸಕ್ಕೆ ಆದಾಯವನ್ನು ಉಂಟುಮಾಡಬೇಕು ಎಂದು ಸದಸ್ಯರು ಮನವಿ ಮಾಡಿದರು.

ಇನ್ನೂ ನಗರಸಭೆಯ ಸ್ಥಾಯಿ ಸಮಿತಿ ರಚಿಸುವ ಬಗ್ಗೆ ಸಭೆಯ ಗಮನಕ್ಕೆ ಅಧಿಕಾರಿಗಳು ತಂದಾಗ ಇಂದೇ ಸ್ಥಾಯಿ ಸಮಿತಿ ಚುನಾವಣೆ ನಡೆಯಬೇಕು ಎಂದು ವಿರೋಧ ಪಕ್ಷದ ಸದಸ್ಯ ಶ್ರೀನಿವಾಸ್ ವಿಶುಕುಮಾರ್, ಜಯಣ್ಣ, ಪ್ರಮೋದ್ ಒಕ್ಕೂರಲಿನಿಂದ ಪಟ್ಟು ಹಿಡಿದರು ಆದರೆ ಎಲ್ಲಾ ಸದಸ್ಯರಿಗೂ ಏಕಮುಖವಾಗಿ ಉತ್ತರ ನೀಡಿದ ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ತಮ್ಮ ಅಭಿಪ್ರಾಯವನ್ನು ಸಭೆಯ ಗಮನಕ್ಕೆ ತಂದರು ಇನ್ನು ಅಂತಿಮವಾಗಿ ಮುಂದಿನ ದಿನಾಂಕದಂದು ನಗರಸಭೆ ಸ್ಥಾಯಿ ಸಮಿತಿ ಚುನಾವಣೆ ನಡೆಸಲಾಗುವುದು ಎಂದು ಅಧ್ಯಕ್ಷೆ ಜೈತುಂಬಿ ಹೇಳಿದರು ಕೊನೆಗೆ ಪಟ್ಟು ಬಿಡದ ವಿರೋಧ ಪಕ್ಷದ ನಾಯಕರು ಸಭೆಯಿಂದ ಹೊರ ನಡೆದ ಪ್ರಸಂಗವು ಜರುಗಿತು, ಕೆಲಕಾಲ ಪೌರಾಯುಕ್ತರು, ಕೆಲ ಅಧಿಕಾರಿಗಳು ಸದಸ್ಯರನ್ನು ಮನವೊಲಿಸಿ ಮರು ಸಭೆಗೆ ಕರೆತಂದು ಸಭೆಯನ್ನು ಮುಂದುವರಿಸಿದ ಪ್ರಸಂಗ ನಡೆಯಿತು.

ನಗರಸಭೆ ಸದಸ್ಯ ಸಿಬಿ ಜಯಲಕ್ಷ್ಮಿ ಕೃಷ್ಣಮೂರ್ತಿಯವರ ಮನವಿಯಂತೆ ನಗರದಲ್ಲಿ ಬೀದಿ ನಾಯಿಗಳ ಆವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ವಾಹನ ಸವಾರರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದ್ದು ಇದರ ಬಗ್ಗೆ ಈ ಹಿಂದೆ ಹಲವಾರು ಸಾಮಾನ್ಯ ಸಭೆಗಳಲ್ಲಿ ವಿಷಯ ಮಂಡಿಸಿದರು ಇದಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ, ಆದ್ದರಿಂದ ತುರ್ತಾಗಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್ ಅನ್ನು ಪ್ರಕಟಿಸಿ ಈ ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಗರಸಭೆ ಸದಸ್ಯ ವಿ ವೈ ಪ್ರಮೋದ್ , ಸದಸ್ಯೆ ಜೈಲಕ್ಷ್ಮಿ ಸಭೆಯ ಗಮನಕ್ಕೆ ಒತ್ತಾಯಿಸಿದರು.

ಇನ್ನು ನಗರಸಭೆ ವ್ಯಾಪ್ತಿಯ ಹಳೆ ಸಂತೆ ಮೈದಾನದಲ್ಲಿ ತರಕಾರಿ ಹೂವಿನ ಹಣ್ಣು ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಕಾಮಗಾರಿಯನ್ನು ಕೈಗೊಳ್ಳುವ ಸಲುವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಸ್ತಾಂತರ ಮಾಡಲು ಚರ್ಚಿಸುವ ವಿಚಾರ ಸಭೆಯ ಗಮನಕ್ಕೆ ತಂದಾಗ ನಗರಸಭೆ ಸದಸ್ಯ ರಾಘವೇಂದ್ರ‌ ನಗರಸಭೆ ಬೊಕ್ಕಸಕ್ಕೆ ಆದಾಯ ತಂದುಕೊಡುವಂತಹ ಯೋಜನೆ ಇದ್ದರೆ ಮಾತ್ರ ಹಸ್ತಾಂತರಿಸಿ ಇಲ್ಲವಾದರೆ ನಮ್ಮ ನಗರಸಭೆ ವ್ಯಾಪ್ತಿಯ ಅನುದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಸೌಲಭ್ಯ ಒದಗಿಸೋಣ ಎಂದು ಸೂಚಿಸಿದರು.

ಇನ್ನು ನೂತನವಾಗಿ ಬೆಂಗಳೂರು ರಸ್ತೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ 13 ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸುವ ಚರ್ಚೆ ಮುನ್ನೆಲೆಗೆ ಬಂದಾಗ ಎಲ್ಲಾ ಸದಸ್ಯರು ಒಕ್ಕೂರಲಿನಿಂದ ಹರಾಜಿಗೆ ಒಪ್ಪಿದರು.

ಹಾಗೂ ಹಾಲಿ‌ ಇರುವ ಉದ್ದೆಮೆ ಮಳಿಗೆಗಳ ಬಾಡಿಗೆ ಬಾಪ್ತು ಸುಮಾರು ಎರಡು ಕೋಟಿ 40 ಲಕ್ಷ ಹಣದಲ್ಲಿ ಹೊಸದಾಗಿ ಇನ್ನು ಹೆಚ್ಚುವರಿ ಮಳಿಗೆಗಳನ್ನು ಪಕ್ಕದಲ್ಲೆ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಜೈತುಂಬಿ, ಉಪಾಧ್ಯಕ್ಷೆ ಸುಜಾತ ಪ್ರಹ್ಲಾದ್, ಸದಸ್ಯ ಕೆ ವೀರಭದ್ರಯ್ಯ, ಮಲ್ಲಿಕಾರ್ಜುನ, ರಾಘವೇಂದ್ರ ,ಹೊಯ್ಸಳ ಗೋವಿಂದ, ಜಯಣ್ಣ, ಪ್ರಮೋದ್ , ಶ್ರೀನಿವಾಸ್, ವಿಶುಕುಮಾರ್ ,ವೆಂಕಟೇಶ್ ,ಕವಿತಾ, ಸಿವಿ ಜಯಲಕ್ಷ್ಮಿ, ಸುಜಾತ, ಪೌರಾಯುಕ್ತ ಜಗರೆಡ್ಡಿ, ಕಚೇರಿ ಅದೀಕ್ಷಕರಾದ ಲಿಂಗರಾಜ್, ಇತರ ಸಿಬ್ಬಂದಿ ವರ್ಗ ಹಾಜರಿದ್ದರು

About The Author

Namma Challakere Local News
error: Content is protected !!