“ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸಮಾಜಕ್ಕೆ ಮಾದರಿಯಾದದ್ದು”:-ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅಭಿಪ್ರಾಯ.
ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಲೇಖಕರು ಹಾಗೂ ಶಿಕ್ಷಕರಾದ ಡಿ.ಶಬ್ರಿನಾ ಮಹಮದ್ ಅಲಿ ಅವರ ಕನ್ನಡ ಕೌಸ್ತುಭ ಮನೆಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಗ್ರಂಥಾಲಯಕ್ಕೆ ಶ್ರೀಶಾರದಾಶ್ರಮ, ಚಳ್ಳಕೆರೆ, ಹಾಗೂ ಡಿವೈನ್ ಪಾರ್ಕ್ ಸಾಲಿಗ್ರಾಮದ ಸದ್ಭಕ್ತರಾದ ಶ್ರೀ ಯತೀಶ್ ಎಂ ಸಿದ್ದಾಪುರ ಅವರು ಹಲವಾರು ಮೌಲ್ಯಯುತ ಪುಸ್ತಕಗಳನ್ನು ನೀಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಲೇಖಕಿ ಶಬ್ರಿನಾ ಮಹಮದ್ ಅಲಿ ಅವರು ಯತೀಶ್ ಎಂ ಸಿದ್ದಾಪುರ ಅವರು ಈ ರೀತಿಯ ಪುಸ್ತಕಗಳನ್ನು ನಮ್ಮ ಮನೆಯ ಗ್ರಂಥಾಲಯಕ್ಕೆ ನೀಡಿರುವುದು, ಒಳ್ಳೆಯ ಓದುಗ ವಲಯಕ್ಕೆ ತುಂಬಾ ನೆರವಾಗುತ್ತದೆ.
ಈ ಪುಸ್ತಕಗಳ ಅಧ್ಯಯನದಿಂದ ಓದುಗರ ಜ್ಞಾನ ಮಟ್ಟ ಹೆಚ್ಚುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ನಮ್ಮ ಮನೆಯ ಗ್ರಂಥಾಲಯಕ್ಕೆ ಎಲ್ಲಾ ರೀತಿಯ ಓದುಗರು ಭೇಟಿ ನೀಡಿ ಪುಸ್ತಕಗಳನ್ನು ಓದಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕವಿಗಳು ಹಾಗೂ ಶಿಕ್ಷಕರಾದ ಮಹಮದ್ ಅಲಿ, ಯತೀಶ್ ಎಂ ಸಿದ್ದಾಪುರ ಹಾಜರಿದ್ದರು.