ನಲಗೇತನಹಟ್ಟಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಮಳೆರಾಯ.
ನಾಯಕನಹಟ್ಟಿ:: ಹೋಬಳಿಯಲ್ಲಿ ಹಿಂಗಾರು ಮಳೆ ಆರ್ಭಟಿಸಿದ್ದು ಶುಕ್ರವಾರ ತಡೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಲಗೇತನಹಟ್ಟಿ ಪಕ್ಕದ ದೊಡ್ಡ ಹಳ್ಳ ಧಾರಾಕಾರವಾಗಿ ಹರಿಯುತ್ತಿರುವ ದೃಶ್ಯ ಕಂಡು ಬಂತು. ಇನೋ ಗ್ರಾಮಸ್ಥರು ಧಾರಾಕಾರವಾಗಿ ಹರಿಯುತ್ತಿರುವ ದೊಡ್ಡ ಹಳ್ಳಕ್ಕೆ ಸಾಲು ಸಾಲು ಭೇಟಿ ನೀಡಿ ವೀಕ್ಷಣೆ ಮಾಡಿ ಸಂತಸವನ್ನು ವ್ಯಕ್ತಪಡಿಸಿದರು.
ಇದೆ ವೇಳೆ ಗ್ರಾಮದ ಈಗಲು ಸಣ್ಣೋಬಯ್ಯ ಮಾತನಾಡಿದರು ಈ ವರ್ಷ ಹಿಂಗಾರು ಮಳೆ ಉತ್ತಮವಾಗಿ ಮಳೆ ಬಂದಿದೆ. ಬರದ ನಾಡು ಎಂಬ ಅಣೆಕಟ್ಟಿ ಕಟ್ಟಿಕೊಂಡಿರುವ ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ಹಿಂಗಾರು ಮಳೆ ನಮ್ಮ ನಲಗೇತನಹಟ್ಟಿ ಗ್ರಾಮದಿಂದ ದೊಡ್ಡ ಹಳ್ಳ ಹರಿದು ಹೋಗುವುದರಿಂದ ಆ ನೀರು ಹಿರೇಕೆರೆ ಕೆರೆಗೆ ಸೇರುತ್ತದೆ ಈ ಭಾಗದ ಜನ ಜಾನುವಾರುಗಳಿಗೆ ಮತ್ತು ರೈತರಿಗೆ ಇನ್ನೂ ಐದು ಆರು ವರ್ಷ ನೀರಿನ ಅಭಾವ ತಪ್ಪಿದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್ ಕೆ ಸುರೇಶ್ ಈಗಲು ರುದ್ರಮುನಿ, ಕೆ ಸಿ ದೊಡ್ಡ ಬೋರಯ್ಯ, ಎಂ.ಎಸ್. ಬೋರ ನಾಯಕ, ಕೆ.ಸಿ ಚನ್ನಕೇಶವ ಸೇರಿದಂತೆ ಗ್ರಾಮಸ್ಥರು ಇದ್ದರು