ಚಳ್ಳಕೆರೆ : ಮಣ್ಣಿಗೆ ಸಾಂಸ್ಕೃತಿಕ ಮತ್ತು ಸ್ವಾಭಿಮಾನದ ಸ್ಪರ್ಶವನ್ನು ಕೊಟ್ಟಂತವರು ರಾಜ ವೀರ ಮದಕರಿ ನಾಯಕರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ನಾಯಕನಹಟ್ಟಿ ಪಟ್ಟಣದಲ್ಲಿ ನಡೆದ ಹಟ್ಟಿ ಮಲ್ಲಪ್ಪ ನಾಯಕ ಸಂಘ ದಲ್ಲಿ ಆಯೋಜಿಸಿದ್ದ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು.
ಹೈದರ್ ಅಲಿಯ ಸೇನೆಯನ್ನು ಬಗ್ಗು ಬಡಿದು ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರ ದೊರೆ ಮದಕರಿ ನಾಯಕ ಎಂದರು.
ಜಗತ್ತು ಕಂಡಂತಹ ಅಪ್ರತಿಮ ಹೋರಾಟಗಾರ ಧೈರ್ಯ ಸಾಹಸ ಸ್ವಾಭಿಮಾನ ಮತ್ತು ಪರಧರ್ಮ ಸಹಿಷ್ಣುತೆಗೆ ಹೆಸರಾದಂತವರು ರಾಜ ವೀರ ಮದಕರಿ ನಾಯಕರು, ರಾಜಕೀಯ ಬಾಂಧವ್ಯ, ಹೋರಾಟ ದೂರ ದೃಷ್ಟಿ, ನಿರ್ಭಿತ ನಡೆ, ಮತ್ತು ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಮದಕರಿ ನಾಯಕರು, ಮರಾಠದ ಪೇಶ್ವೆಗಳು ಮತ್ತು ಮೈಸೂರು ಸಂಸ್ಥಾನದ ಬಾಂಧವ್ಯವನ್ನು ಚಾಣಾಕ್ಷತನದಿಂದ ಪಡೆದು ಹರಪನಹಳ್ಳಿ ರಾಯದುರ್ಗ ಸವಣೂರು ಮತ್ತು ಬಿದನೂರು ಸಂಸ್ಥಾನ ದ ಅರಸರುಗಳಿಗೆ ಸಿಂಹ ಸ್ವಪ್ನ ವಾಗಿದ್ದರು,ಕೊನೆಗೆ ಮದಕರಿ ನಾಯಕರಿಂದ ಸಹಾಯ ಪಡೆದ ಹೈದರಾಲಿಗೆ ಚಿತ್ರದುರ್ಗದ ಮೇಲೆ ಕಣ್ಣು ಬಿದ್ದು ನಾಲ್ಕು ಸಾರಿ ದಂಡೆತ್ತಿ ಬಂದರೂ ಕೂಡ ಮದಕರಿ ನಾಯಕರ ಸೈನ್ಯ ಹೈದರಾಲಿ ಸೈನ್ಯವನ್ನು ಧೂಳಿಪಟ ಮಾಡಿತು, ನೇರವಾಗಿ ಚಿತ್ರದುರ್ಗದ ಪಾಳ್ಳೇಗಾರರ ಸೈನ್ಯವನ್ನು ಎದುರಿಸಲು ಸಾಧ್ಯವಿಲ್ಲ ವೆಂಬ ಅಂಶವನ್ನು ಅರಿತ ಹೈದರಾಲಿ, ಮದಕರಿ ಸಂಸ್ಥಾನದಲ್ಲಿದ್ದಂತ ಕಳ್ಳಿ ನರಸಪ್ಪ ಮತ್ತು ಇತರೆಯವರ ಸ್ವಾರ್ಥ ಮತ್ತು ಕುಚೋದ್ಯದಿಂದ ಯುದ್ಧ ಸಾಮಗ್ರಿಗಳನ್ನು ಕುತಂತ್ರದಿಂದ ಮುಕ್ಕು ಮಾಡಿ ಇಡೀ ಸೈನ್ಯವನ್ನು ನಿತ್ರಾಣ ಗೊಳಿಸಿ ಕೊನೆಗೆ ಯುದ್ಧದಲ್ಲಿ ಸೋಲಬೇಕಾಯಿತು.
ಇಂತಹ ಪರಾಕ್ರಮಿಯದ ದೇಶಭಕ್ತನಾದ ಮತ್ತು ಸ್ವಾಭಿಮಾನಿಯಾದ ಮದಕರಿ ನಾಯಕ ಆದರ್ಶ ಮತ್ತು ಸ್ವಾಭಿಮಾನವನ್ನು ಇವತ್ತಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕಾಗಿದೆ. ಇವತ್ತಿನ ಪ್ರಸ್ತುತದಲ್ಲಿ ಕತ್ತಿಯಿಂದ ಜಗತ್ತನ್ನಾಳುವ ಕಾಲ ಅಂತ್ಯವಾಗಿದ್ದು ಪೆನ್ನಿನಿಂದ ಜಗತ್ತನ್ನು ಅರಿಯುವ ಮತ್ತು ಆಳುವ ಕಾಲ ಬಂದಿದ್ದು ಈ ಜನಾಂಗದ ಪ್ರತಿ ಕುಟುಂಬದಲ್ಲಿ ಸಂಸ್ಕಾರ ಯುತವಾದಂತ ಮತ್ತು ಗುಣಮಟ್ಟದ ಶಿಕ್ಷಣವನ್ನು ತಪ್ಪದೇ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ನೀಡುವ ಅಗತ್ಯವಿದ್ದು ಈ ದಿಸೆಯಲ್ಲಿ ಜನಾಂಗದ ಎಲ್ಲರೂ ಕೂಡ ಇಂದು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ತಿಪ್ಪೇಸ್ವಾಮಿ ಮಾತನಾಡಿ
ಇದುಗ ಜಿಲ್ಲೆಯ ಈ ಜನಾಂಗದವರು ಅತ್ಯಂತ ಪರಾಕ್ರಮಿಗಳು ಮತ್ತು ಸ್ವಾಭಿಮಾನಕ್ಕೆ ಹೆಸರಾದವರು ಹೆಚ್ಚು ಶೈಕ್ಷಣಿಕ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಮಾಡಬೇಕಿದೆ ನಾಯಕ ಜನಾಂಗವು ಹೇರಳವಾಗಿ ಜಾಸ್ತಿ ಇರುವಂತಹ ಈ ಜಿಲ್ಲೆಯಿಂದಲೇ ಸಾಮಾಜಿಕ ಬದಲಾವಣೆಯ ಚಿಂತನೆಯಾಗಬೇಕಿದೆ ಮದಕರಿ ನಾಯಕರು ಧೈರ್ಯ ಸಾಹಸಕಷ್ಟೇ ಅಲ್ಲ ಸಾಮರಸ್ಯಕ್ಕೂ ಕೂಡ ಹೆಸರುವಾಸಿಯಾದವರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇವರಿಗೆದ್ದಂತಹ ಹೌದಾರಿಯ ನೈಪುಣ್ಯತೆ ಮತ್ತು ಸ್ವಾಭಿಮಾನವನ್ನು ರೂಡಿಸಿಕೊಳ್ಳಬೇಕಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ನಾಯಕ್ ಮಾತನಾಡಿ ವಾಲ್ಮೀಕಿ ಸಮಾಜ ಉತ್ತಮ ಶಿಕ್ಷಣ ಪಡೆಯಬೇಕು.
ದುಶ್ಚಟಗಳನ್ನು ಬಿಡಿ ಓದಿದ ಓದಿನ ಕಡೆಗೆ ಹೆಚ್ಚು ಗಮನ ಹೆದರಿಸಿ ಅಂದರು ಮದಕರಿ ನಾಯಕ ಕೊಡುಗೆ ಬಹಳ ದೊಡ್ಡದು ಸ್ವಾಭಿಮಾನಿ ಸಹ ಆಗಿದ್ದರು.
ಡಾಕ್ಟರ್ ಬಿ ಅಂಬೇಡ್ಕರ್ ಬಾಲ್ಯದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಇಡೀ ವಿಶ್ವಕ್ಕೆ ಮೆಚ್ಚಿಸುವಂತಹ ಸಂವಿಧಾನವನ್ನು ಬರೆದಿದ್ದಾರೆ ಎಂದು ಅವರು ಮಾತನಾಡಿದರು
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ಹನುಮಣ್ಣ, ಚನ್ನಬಸನಹಟ್ಟಿ ನಾಗರಾಜ್, ಟಿ ಬಸಣ್ಣ, ಮಲ್ಲೂರಹಳ್ಳಿ ತಿಪ್ಪೇಸ್ವಾಮಿ, ಕೇಟಿ ನಾಗರಾಜ್, ಮಲ್ಲೂರಹಳ್ಳಿ ಕಾಟಯ್ಯ, ಕಾಟಂ ಲಿಂಗಯ್ಯ, ಬೋರಸ್ವಾಮಿ, ಬೋಸ ದೇವರ ಹಟ್ಟಿ ಪ್ರಕಾಶ್, ಗಜ್ಜುಗನಹಳ್ಳಿ ಬೋರಯ್ಯ, ಪಿ ಓಬಯ್ಯ, ಹಟ್ಟಿ ಮಲ್ಲಪ್ಪ ನಾಯಕ ಸಂಘದ ಸದಸ್ಯರು ವಾಲ್ಮೀಕಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು