ನಲಗೇತನಹಟ್ಟಿ ಗ್ರಾ. ಪಂ.ಯಲ್ಲಿ ಗ್ರಾಮ ಆರೋಗ್ಯ ತರಬೇತಿಗೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಲಮ್ಮ
ಪೂರ್ಣ ಓಬಯ್ಯ

ನಾಯಕನಹಟ್ಟಿ:; ಗ್ರಾಮೀಣ ಪ್ರದೇಶದ ಬಡ ಜನರಿಗೆ ಆರೋಗ್ಯ ಅಮೃತ ಯೋಜನೆ ವರದಾನವಾಗಿದೆ ನಲಗೇತನಹಟ್ಟಿ ಗ್ರಾ. ಪಂ. ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ ಹೇಳಿದ್ದಾರೆ.

ಸೋಮವಾರ ಹೋಬಳಿಯ ನಲಗೇತನಹಟ್ಟಿ ಗ್ರಾ. ಪಂ. ಕಾರ್ಯಾಲಯದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಭಾಗಿತ್ವದಲ್ಲಿ ತಾಲೂಕು ಮಟ್ಟದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು. ಚರಂಡಿ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನ ಕಾಪಾಡಿಕೊಂಡರೆ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯವಿಲ್ಲ ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕೆ ಕೈಜೋಡಿಸಿ ಎಂದು ಸಲಹೆ ನೀಡಿದರು.

ಇನ್ನೂ ಗ್ರಾ.ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ ಮಾತನಾಡಿದರು ಗ್ರಾಮೀಣ ಪ್ರದೇಶದ ಬಡ ಜನರಿಗೆ ಸರ್ಕಾರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ ಗ್ರಾಮದ ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಅಂಗನವಾಡಿ ಶಿಕ್ಷಕಿರು ಆಶಾ ಕಾರ್ಯಕರ್ತೆಯರು ನಮ್ಮ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಎಂ ಬಿ ಬೊಮ್ಮಲಿಂಗಯ್ಯ, ಬಂಗಾರಪ್ಪ ಕೆ.ಬಿ. ಬೋಸಯ್ಯ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್, ತಾಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಮ್ಮ, ಪಿಡಿಒ ರಾಜಣ್ಣ, ಗ್ರಾಮಸ್ಥರಾದ ಎಸ್. ಜಿ. ಸಣ್ಣ ಬೋರಯ್ಯ, ನಿಂಗರಾಜ್, ಹಾಗೂ ಆಶಾ ಕಾರ್ಯಕರ್ತೆರಾದ ಅನ್ನಪೂರ್ಣಮ್ಮ, ಕೆ.ಬಿ. ಪಾಪಮ್ಮ, ಶೈಲಜಾ, ಎಸ್ ಮಂಜುಮ್ಮ, ಪದ್ಮಾಕ್ಷಿ, ಶಕುಂತಲಾ, ಅಂಗನವಾಡಿ ಶಿಕ್ಷಕಿರಾದ ಬೋರಮ್ಮ, ಚಂದ್ರಮತಿ, ಈ.ಎಸ್ ರಮ್ಯಾ, ಸುಧಾ, ಮಲ್ಲಮ್ಮ, ಲಕ್ಕಮ್ಮ, ಎಂಬಿಕೆ ಗಾಯತ್ರಿ ಎತ್ತಿನಹಟ್ಟಿ, ಪಶುಸಖಿ ಲಕ್ಷ್ಮಿ, ಕೃಷಿ ಸಖಿ ಭಾಗ್ಯಮ್ಮ, ಕಾಯಕ ಮಿತ್ರ ಶೈಲಜಾ, ಕಾರ್ಯದರ್ಶಿ ಕೆಂಚಪ್ಪ, ಉಪಸ್ಥಿತರಿದ್ದರು

Namma Challakere Local News
error: Content is protected !!